ತಿರುವನಂತಪುರ: ರಾಜ್ಯದಲ್ಲಿ ಇಲಿಜ್ವರವನ್ನು ಅತಿ ಶೀಘ್ರವಾಗಿ ಪತ್ತೆಮಾಡುವ ವಿಶೇಷ ಸೌಲಭ್ಯದ ಲ್ಯಾಬ್ ಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದೆಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಇಂದು ತಿಳಿಸಿದ್ದಾರೆ.
ಲೆಪ್ಟೊಸ್ಪೈರೋಸಿಸ್ ಪರೀಕ್ಷೆಗೆ ರಾಜ್ಯದ ಆರು ಲ್ಯಾಬ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವೆ ಹೇಳಿದ್ದಾರೆ.
ಈ ಸೌಲಭ್ಯವು ಪ್ರಸ್ತುತ ತಿರುವನಂತಪುರಂ ರಾಜ್ಯ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಮತ್ತು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ಮಾತ್ರ ಲಭ್ಯವಿದೆ. ಇದಲ್ಲದೇ, ಪತ್ತನಂತಿಟ್ಟ ಮತ್ತು ಎರ್ನಾಕುಳಂ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳಲ್ಲಿ ಒಂದು ವಾರದೊಳಗೆ ಮತ್ತು ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು.