ತಿರುವನಂತಪುರ: ಕೊಲ್ಲಂ ನಿವಾಸಿ ವಿಸ್ಮಯಾ ಕೊಲೆ ಪ್ರಕರಣದ ಆರೋಪಿ ಕಿರಣ್ ಕುಮಾರ್ ಗೆ ಜೈಲಲ್ಲಿ ತೋಟಗಾರಿಕೆಗಾಗಿ ನಿಯುಕ್ತಿಗೊಂಡಿದ್ದಾನೆ. ಕಿರಣ್ ನ ದಿನದ ಕೆಲಸ ಬೆಳಿಗ್ಗೆ 7.15 ಕ್ಕೆ ಪ್ರಾರಂಭವಾಗುತ್ತದೆ. ಅವರಿಗೆ ದಿನಕ್ಕೆ 63 ರೂ. ವೇತನ ನೀಡಲಾಗುತ್ತದೆ. ಒಂದು ವರ್ಷದ ನಂತರ ದಿನಕ್ಕೆ 127 ರೂ.ಹೆಚ್ಚಳಗೊಳ್ಳಲಿದೆ.
ಪೂಜಾಪುರ ಕೇಂದ್ರ ಕಾರಾಗೃಹದ ಗೋಡೆಯೊಳಗಿನ 9.5 ಎಕರೆ ಪ್ರದೇಶದಲ್ಲಿ ಸಾಗುವಳಿ ನಡೆಯುತ್ತಿದೆ. ಕಾರಾಗೃಹದ ಸುಂದರೀಕರಣದ ಅಂಗವಾಗಿ ಕೆಲವೆಡೆ ಅಲಂಕಾರಿಕ ಗಿಡಗಳನ್ನೂ ನೆಡಲಾಗಿದೆ. ಅದನ್ನು ನೋಡಿಕೊಳ್ಳುವುದು ಕಿರಣ್ ಸೇರಿದಂತೆ ಆಯ್ದ ಕೈದಿಗಳ ಜವಾಬ್ದಾರಿ. ಉಪಾಹಾರ ಮತ್ತು ಊಟಕ್ಕೆ ವಿರಾಮಗಳಿವೆ. ಸಂಜೆ ಚಹಾ ಲಭ್ಯವಿದೆ. ಸಂಜೆ 5.45ರವರೆಗೆ ಕೆಲಸವಿದೆ. ಕೈದಿಗಳಿಗೆ ಮೊದಲ ವರ್ಷ ಗೋಡೆಗಳ ಹೊರಗೆ ಕೆಲಸ ನೀಡಲಾಗುವುದಿಲ್ಲ. ಕಿರಣ್‌ಗೆ ತೋಟಗಾರಿಕೆ ಸಿಕ್ಕಿದ್ದು ಇದೇ ಕಾರಣಕ್ಕೆ.
ಕಿರಣ್‌ಗೆ 10 ವರ್ಷ ಜೈಲು ಶಿಕ್ಷೆ ಮತ್ತು 12.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಜೊತೆಗೆ ವಿವಿಧ ಕಾನೂನುನಡಿ 25 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಿದ್ದು, ಆದರೆ ಒಟ್ಟು ಶಿಕ್ಷೆ 10 ವರ್ಷಗಳಿಗೆ ಇಳಿಸಲಾಗಿದೆ.