ಮುಂಬೈ: ರೂಪಾಯಿ ಮೌಲ್ಯ ಡಾಲರ್ ವಿರುದ್ಧ ಜೂ.27 ರಂದು ಪ್ರಾರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಏರಿಕೆ ಕಂಡಿದ್ದು ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 78.27 ರೂ ಗಳಷ್ಟಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ದೇಶೀಯ ಷೇರುಗಳ ಖರೀದಿ ಹಾಗೂ ಗ್ರೀನ್ ಬ್ಯಾಕ್ ನ ಕುಸಿತದ ಪರಿಣಾಮ ಹೂಡಿಕೆದಾರರ ಭಾವನೆಗಳನ್ನು ಬಲಿಷ್ಠಗೊಳಿಸಿದೆ.
ಆದರೂ ಕಚ್ಚಾ ತೈಲ ಬೆಲೆ ಹಾಗೂ ಹೊರಹೋಗುತ್ತಿರುವ ನಿರಂತರ ವಿದೇಶಿ ನಿಧಿಗಳು ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಅಡ್ಡಿಯಾಗಿವೆ ಎಂದು ವಿದೇಶೀ ವಿನಿಮಯ ವಿತರಕರು ಹೇಳಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿಯ ಪ್ರಾರಂಭಿಕ ವಹಿವಾಟು ಡಾಲರ್ ವಿರುದ್ಧ 78.24 ರೂಪಾಯಿಗಳಷ್ಟಿತ್ತು ನಂತರ 6 ಪೈಸೆಯಷ್ಟು ಏರಿಕೆ ಕಂಡಿದ್ದು 78.27 ರಷ್ಟಾಯಿತು. ಈ ಹಿಂದಿನ ವಹಿವಾಟಿನಲ್ಲಿ ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 78.33 ರಷ್ಟಿತ್ತು.