ಪಾಲಕ್ಕಾಡ್: ಕೇರಳ ಬ್ಯಾಂಕ್‌ನಲ್ಲಿ ಉದ್ಯೋಗ ನೀಡುವುದಾಗಿ ವಂಚನೆ ನಡೆದಿರುವುದು ವರದಿಯಾಗಿದರ. ಕೇರಳ ಬ್ಯಾಂಕ್ ನಿರ್ದೇಶಕ ಮತ್ತು ಮಲಂಪುಳ ಶಾಸಕ ಎ. ಪ್ರಭಾಕರನ್ ಮತ್ತು ಸಿಪಿಎಂ ಪಾಲಕ್ಕಾಡ್ ಮತ್ತು ಕಣ್ಣೂರು ಜಿಲ್ಲಾ ಕಾರ್ಯದರ್ಶಿಗಳ ಹೆಸರಿನಲ್ಲಿ ಹಗರಣ ಎಸಗಲಾಗಿದೆ. ಪಾವತಿ ದಾಖಲೆಗಳೊಂದಿಗೆ ಮಲಂಪುಳ ಎಂ.ಎಲ್ ಪ್ರಭಾಕರನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಗರಣದ ಹಿಂದೆ ಕಣ್ಣೂರಿನ ಸಿದ್ದಿಕ್, ಪಾಲಕ್ಕಾಡ್‌ನ ಸಿದ್ದಿಕ್ ಮತ್ತು ತೋಣಿಯ ವಿಜಯಕುಮಾರ್ ಎಂಬವರ ಕೈವಾಡವಿದೆ ಎಂದು ಆರೋಪಿಸಿ ಶಾಸಕರು ದೂರು ದಾಖಲಿಸಿದ್ದಾರೆ. ಕೇರಳ ಬ್ಯಾಂಕ್‌ನಲ್ಲಿ 2400ಕ್ಕೂ ಹೆಚ್ಚು ಗುಮಾಸ್ತರ ಹುದ್ದೆಗಳಿವೆ. ಈ ಹುದ್ದೆಗಳನ್ನು ಪಿಎಸ್‌ಸಿ ಮೂಲಕ ಭರ್ತಿ ಮಾಡಬೇಕು. ಆದರೆ ವಂಚಕರು ನೇಮಕಾತಿಗೆ 7 ಲಕ್ಷ ರೂ.ಬೇಡಿಕೆಯೊಡ್ಡಿದ್ದಾರೆ. ಮಲಂಪುಳ ಶಾಸಕ ಹಾಗೂ ಜಿಲ್ಲಾ ಕಾರ್ಯದರ್ಶಿಗಳ ಅರಿವಿನ ಮೇರೆಗೆ ನೇಮಕ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ.
ಆದರೆ ಈ ಹಗರಣದಲ್ಲಿ ನನ್ನ ಪಾತ್ರವಿಲ್ಲ ಎಂದು ಆರೋಪಿ ವಿಜಯಕುಮಾರ್ ಹೇಳಿದ್ದಾನೆ. ಸಿದ್ದಿಕಿ ಹೇಳುವಂತೆ ವಿಜಯಕುಮಾರ್ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ 75 ಸಾವಿರ ರೂ.ಪಡೆದಿದ್ದ ಎನ್ನಲಾಗಿದೆ.