ನವದೆಹಲಿ:ಭಾರತೀಯ ದೂರಸಂಪರ್ಕ ಮಾರುಕಟ್ಟೆಯು ಕುಗ್ಗುತ್ತಿರುವಂತೆ ಕಾಣುತ್ತಿದ್ದು, ಎಪ್ರಿಲ್ನಲ್ಲಿ 75 ಲಕ್ಷ ಜನರು ನೆಟ್ವರ್ಕ್ಗಳಿಂದ ಹೊರಬಿದ್ದಿದ್ದಾರೆ. ಆದರೆ ಲಕ್ಷಾಂತರ ಜನರು ಈ ಅಗತ್ಯ ಸೇವೆಯನ್ನು ತ್ಯಜಿಸಿರುವುದು ಅತ್ಯಂತ ಅಸಂಭವನೀಯವಾಗಿದೆ ಎಂದು Financialexpress ವರದಿ ಮಾಡಿದೆ.
ನವದೆಹಲಿ:ಭಾರತೀಯ ದೂರಸಂಪರ್ಕ ಮಾರುಕಟ್ಟೆಯು ಕುಗ್ಗುತ್ತಿರುವಂತೆ ಕಾಣುತ್ತಿದ್ದು, ಎಪ್ರಿಲ್ನಲ್ಲಿ 75 ಲಕ್ಷ ಜನರು ನೆಟ್ವರ್ಕ್ಗಳಿಂದ ಹೊರಬಿದ್ದಿದ್ದಾರೆ. ಆದರೆ ಲಕ್ಷಾಂತರ ಜನರು ಈ ಅಗತ್ಯ ಸೇವೆಯನ್ನು ತ್ಯಜಿಸಿರುವುದು ಅತ್ಯಂತ ಅಸಂಭವನೀಯವಾಗಿದೆ ಎಂದು Financialexpress ವರದಿ ಮಾಡಿದೆ.
ಬಳಕೆದಾರರ ಸ್ವಯಂ ಇಚ್ಛೆಯೋ ಅಲ್ಲವೋ ಎನ್ನುವುದು ಗೊತ್ತಿಲ್ಲ. ಏರ್ಟೆಲ್ ಮತ್ತು ರಿಲಯನ್ಸ್ ಜಿಯೊದಂತಹ ಪ್ರಮುಖ ದೂರಸಂಪರ್ಕ ಕಂಪನಿಗಳು ಸಕ್ರಿಯ ಯೋಜನೆಗೆ ಚಂದಾದಾರರಾಗುವಂತೆ ಯೋಜನೆಯನ್ನು ನವೀಕರಿಸದ ಬಳಕೆದಾರರಿಗೆ ಆಗಾಗ್ಗೆ ನೆನಪಿಸುತ್ತವೆ ಮತ್ತು ಬಳಿಕ ಅವರ ಸಿಮ್ಗಳನ್ನು ಸ್ಥಗಿತಗೊಳಿಸುತ್ತವೆ.
ಆದಾಗ್ಯೂ ಕಳೆದ ಕೆಲವು ತಿಂಗಳುಗಳಿಂದ ದೂರಸಂಪರ್ಕ ದರಗಳು ಶೇ.20ರಿಂದ ಶೇ.25ರಷ್ಟು ಹೆಚ್ಚಿವೆ ಮತ್ತು ಖರ್ಚಿನ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಭಾರತೀಯ ಬಳಕೆದಾರರಿಗೆ ಎರಡನೇ ಸಿಮ್ ಗಳು ಹೊರೆಯಾಗುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ಸಿಮ್ ಗಳು ಸ್ಥಗಿತಗೊಳ್ಳುತ್ತಿದ್ದರೂ ಏರ್ಟೆಲ್ ಮತ್ತು ಜಿಯೋ ಅಕ್ಷರಶಃ ಕಳೆದುಕೊಳ್ಳುವುದು ಏನೂ ಇಲ್ಲ. ಏಕೆಂದರೆ ಟ್ರಾಯ್ ನೀಡಿರುವ ಮಾಹಿತಿಯಂತೆ ಅವೆರಡೂ ಕಂಪನಿಗಳು ಎಪ್ರಿಲ್ನಲ್ಲಿ 25 ಲ.ಹೊಸ ಚಂದಾದಾರರನ್ನು ಸೇರಿಸಿಕೊಂಡಿವೆ.
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸೇರಿದಂತೆ ದೇಶದಲ್ಲಿಯ ಪ್ರತಿಯೊಂದೂ ದೂರಸಂಪರ್ಕ ಸೇವೆ ಪೂರೈಕೆ ಕಂಪನಿ ಎಪ್ರಿಲ್ನಲ್ಲಿ ಸಕ್ರಿಯ ಚಂದಾದಾರರನ್ನು ಕಳೆದುಕೊಂಡಿದೆ ಎನ್ನುವುದನ್ನು ಟ್ರಾಯ್ ದತ್ತಾಂಶಗಳು ಬಹಿರಂಗಗೊಳಿಸಿವೆ. ಇದು ಸಾಮಾನ್ಯವಾಗಿ ನಡೆಯುತ್ತಿರುವ ಸಂಗತಿಯಲ್ಲ, ಏಕೆಂದರೆ ಇತರರು ಚಂದಾದಾರರನ್ನು ಕಳೆದುಕೊಂಡಿದ್ದರೂ ಕನಿಷ್ಠ ಒಂದು ಅಥವಾ ಎರಡು ದೂರಸಂಪರ್ಕ ಕಂಪನಿಗಳು ಸಕ್ರಿಯ ಚಂದಾದಾರರನ್ನು ಗಳಿಸಿಕೊಂಡಿವೆ.
2022ನೇ ಸಾಲಿನ ಮೊದಲ ಮೂರು ತಿಂಗಳುಗಳಲ್ಲಿ ಟೆಲಿಕಾಮ್ ಕಂಪನಿಗಳು 210 ಲ.ಸಕ್ರಿಯ ಚಂದಾದಾರರನ್ನು ಸೇರಿಸಿಕೊಂಡ ಬಳಿಕ ಎಪ್ರಿಲ್ನಲ್ಲಿ ಕುಸಿತ ದಾಖಲಾಗುವುದರೊಂದಿಗೆ ದಿಢೀರ್ ಬದಲಾವಣೆ ಕಂಡು ಬಂದಿದೆ. 5ಜಿ ಸ್ಪೆಕ್ಟ್ರಂ ಬರುತ್ತಿರುವುದೂ ಸಿಮ್ಗಳು ಸ್ಥಗಿತಗೊಳ್ಳಲು ಕಾರಣವಾಗಿದೆ. ಸ್ಪೆಕ್ಟ್ರಂ ಹರಾಜಿಗೆ ಬಹಳ ಮೊದಲೇ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ಕಂಪನಿಗಳು ತೊಡಗಿವೆ, ಅಂದರೆ ಯೋಜನೆಯನ್ನು ನವೀಕರಿಸದ ಚಂದಾದಾರರನ್ನು ತೆಗೆದುಹಾಕಿ ತಮ್ಮ ನೆಟ್ವರ್ಕ್ಗಳು ಮತ್ತು ಇತರ ಸಂಪನ್ಮೂಲಗಳನ್ನು ಮುಕ್ತಗೊಳಿಸುತ್ತಿವೆ ಎಂದು ವರದಿ ತಿಳಿಸಿದೆ.