ನವದೆಹಲಿ: ಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಪ್ರಗತಿ ಹೊಂದುವ ನಿರೀಕ್ಷೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. ಇದು ಆರ್ಥಿಕ ಪ್ರಗತಿ ಹೊಂದುತ್ತಿರುವ ರಾಷ್ಟ್ರಗಳ ಪೈಕಿ ವೇಗದ ಬೆಳವಣಿಗೆ ಎಂದೆನಿಸಲಿದೆ ಎಂದಿದ್ದಾರೆ.

ಬ್ರಿಕ್ಸ್ ವಾಣಿಜ್ಯ ವೇದಿಕೆಯ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಭಾರತದ ಡಿಜಿಟಲ್ ಆರ್ಥಿಕತೆಯ ಮೌಲ್ಯವು 2025ರ ವೇಳೆಗೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ ಎಂದಿದ್ದಾರೆ.
ನವ ಭಾರತದ ಪ್ರತಿಯೊಂದು ವಿಭಾಗದಲ್ಲೂ ಪಾರದರ್ಶಕ ಬದಲಾವಣೆಗಳಾಗುತ್ತಿವೆ. ಡಿಜಿಟಲ್ ಬೆಳವಣಿಗೆಯೇ ರಾಷ್ಟ್ರದ ಆರ್ಥಿಕತೆ ಪುನಶ್ಚೇತನಗೊಳ್ಳಲು ಕಾರಣ. ಪ್ರತಿಯೊಂದು ಸೆಕ್ಟರ್‌ನಲ್ಲಿ ಆವಿಷ್ಕಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ಎಂದರು.
ಬ್ರಿಕ್ಸ್ ಶೃಂಗಸಭೆಗೂ ಮುನ್ನ ದಿನ ವಾಣಿಜ್ಯ ಸಭೆ ನಡೆಯುತ್ತದೆ.