ನವದೆಹಲಿ:ಅಮೆರಿಕ ಮೂಲದ ಕ್ರೆಡಿಟ್ ರೇಟಿಂಗ್ ಏಜೆನ್ಸಿ 'ಫಿಚ್' ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜನ್ನು ಶೇ.8.5ರಿಂದ ಶೇ.7.8ಕ್ಕೆ ಇಳಿಸಿದೆ. ಹಣದುಬ್ಬರದಲ್ಲಿ ಏರಿಕೆಯಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜಿನಲ್ಲಿ ಇಳಿಕೆ ಮಾಡಲಾಗಿದೆಯೆಂದು ಫಿಚ್ ಹೇಳಿಕೆಯಲ್ಲಿ ತಿಳಿಸಿದೆ.
ಹಣದುಬ್ಬರ ಜಾಗತಿಕ ಮಟ್ಟದಲ್ಲಿ ಸಾಮಾಗ್ರಿಗಳ ದರಗಳ ಮೇಲೆ ಆಘಾತಕಾರಿ ಪರಿಣಾಮ ಬೀರಿದೆ. ಇದರಿಂದಾಗಿ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆಯ ವೇಗಕ್ಕ ತಣ್ಣೀರೆರಚಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನಂದಾಜನ್ನು 'ಫಿಚ್' ಏಜೆನ್ಸಿ ಪರಿಷ್ಕರಿಸಿರುವುದು ಇದು ಮೂರನೆ ಸಲವಾಗಿದೆ. ಈ ಮೊದಲು ಅದು ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಶೇ.10.3ರಿಂದ ಶೇ.8.5ಕ್ಕಿಳಿಸಿತ್ತು.
ಭಾರತದ ಆರ್ಥಿಕತೆಯು ತ್ವರಿತವಾಗಿ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದರ ಸೊವೆರೈನ್ ರೇಟಿಂಗ್ ಅನ್ನು ಸ್ಥಿರದಿಂದ ಋಣಾತ್ಮಕತೆಗೆ ಬದಲಾಯಿಸಿದೆ. ಒಂದು ದೇಶವು ಸಾಲವನ್ನು ಪಡೆಯಲು ಅದಕ್ಕಿರುವ ಅರ್ಹತೆಯನ್ನು ಅಂದಾಜಿಸುವುದನ್ನು ಸೊವೆರೈನ್ ಕ್ರೆಡಿಟ್ ರೇಟಿಂಗ್ ಎನ್ನಲಾಗುತ್ತದೆ. ಒಂದು ನಿರ್ದಿಷ್ಟ ದೇಶಕ್ಕೆ ಸಾಲವನ್ನು ನೀಡುವಲ್ಲಿ ಇರುವ ಅಪಾಯಗಳ ಬಗ್ಗೆ ಈ ರೇಟಿಂಗ್ ಮೂಲಕ ಅಂದಾಜಿಸಲಾಗುತ್ತದೆ.