ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ 2022 ಮೇ 30-ರಂದು ಎಂಟು ವರ್ಷ ಪೂರೈಸಿದ್ದು, ಸಂದರ್ಭ ಕೇಂದ್ರಸರ್ಕಾರದ ಆಡಳಿತ ಮತ್ತು ಜನಕಲ್ಯಾಣ ಯೋಜನೆಗಳನ್ನು ಜನಸಮೂಹಕ್ಕೆ ತಲುಪಿಸಿ ಎಂಬ ಗುರಿಯೊಂದಿಗೆ 'ಸೇವೆ-ಸ್ವಚ್ಛ ಆಡಳಿತ- ಬಡಜನರ ಕಲ್ಯಾಣ' ಎಂಬ ಬ್ಯಾನರ್‍ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಸಂಪರ್ಕ ಕಾರ್ಯಕ್ರಮ:
ಜಿಲ್ಲಾದ್ಯಂತ ಜೂನ್ 5 ರಿಂದ 15 ರವರೆಗೆ ಎಲ್ಲಾ ಬೂತ್‍ಗಳ ಮನೆ ಸಂಪರ್ಕ ಅಭಿಯಾನ ಕೈಗೊಳ್ಳಲಾಗಿದೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. 5ರಂದು ಬೆಳಗ್ಗೆ 11ಕ್ಕೆ ಮೊಗ್ರಾಲ್ ಪುತ್ತೂರು ಪಂಚಾಯಿತಿಯ ಬೆದ್ರಡ್ಕ ಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 6ರಿಂ ವಿವಿಧ ವಲಯಗಳ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿರುವುದು.
6ರಂದು ರೈತರೊಂದಿಗೆ ಸಂವಾದ, 7ರಂದು ಮಹಿಳಾ ಮುಖಂಡರು, 8ರಂದು ಪ.ಜಾತಿ ವಿಭಾಗದವರು, 9ರಂದು ಪ.ವರ್ಗದವರು, 10ರಂದು ಇತರ ಹಿಂದುಳಿದ ಸಮುದಾಯದವರು, 11ರಂದು ಸಮಾಜದಲ್ಲಿ ಕಡೆಗಣಿಸಲ್ಪಟ್ಟವರು, 12ರಂದು ನಗರಪ್ರದೇಶದ ಬಡ ಕುಟುಂಬಗಳು, 13ರಂದು ಉತ್ತಮ ಸಾಧನೆ ತೋರಿದವರು ಹಾಗೂ ಗಣ್ಯ ವಯಕ್ತಿಗಳು, 14ರಂದು ಆರೋಗ್ಯ ಇಲಾಖೆ ಕಾರ್ಯಕರ್ತರು, ವ್ಯಾಕ್ಸಿನೇಶನ್‍ನಲ್ಲಿ ಸೇವೆಸಲ್ಲಿಸಿದವರು, 15ರಂದು ಕೇಂದ್ರಾವಷ್ಕøತ ಯೋಜನೆ ಫಲಾನುಭವಿಗಳ ಜತೆ ಸಂವಾದ ನಡೆಯಲಿರುವುದು. ಈ ಕಾಳಾವಧಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರು. ಕೇರಳ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಪಕ್ಷದ ಮುಖಂಡರುಪಾಲ್ಗೊಳ್ಳಲಿರುವುದಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಎನ್. ಸತೀಶ್, ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಉಪಸ್ಥಿತರಿದ್ದರು.