ಕಾಸರಗೋಡು: ಈ ವರ್ಷದ ಟ್ರೋಲಿಂಗ್ ನಿಷೇಧ ಜೂ. 9ರಂದು ಆರಂಭಗೊಳ್ಳಲಿದ್ದು, ಜಿಲ್ಲೆಯ ಮೀನುಗಾರರು ಕೆಲವೊಂದು ಸೂಚನೆ ಹಾಗೂ ಎಚ್ಚರಿಕೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಟ್ರಾಲಿಂಗ ನಿಷೇಧ ಕುರಿತು ಜಿಲ್ಲಾ ಮಟ್ಟದ ಸಭೆಯಲ್ಲಿ ಫಿಶರೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದರು.
ಜೂನ್ 9ರ ಮಧ್ಯರಾತ್ರಿಯಿಂದ ಜುಲೈ 31ರ ಮಧ್ಯರಾತ್ರಿಯವರೆಗ್ಯೊಟ್ಟು 52 ದಿವಸಗಳ ಟ್ರೋಲಿಂಗ್ ನಿಷೇಧ ಜಾರಿಯಲ್ಲಿರಲಿದೆ. ಟ್ರೋಲ್ ನಿಷೇಧ ಸಂದರ್ಭ ಸಮುದ್ರದಲ್ಲಿ ಹೋಗುವ ಮೀನುಕಾರ್ಮಿಕರು ಬಯೋಮೆಟ್ರಿಕ್ ಐ.ಡಿ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಬಂದರು ಮತ್ತು ಇತರೆಡೆ ಚಟುವಟಿಕೆ ನಡೆಸುತ್ತಿರುವ ಡೀಸಲ್ ಬಂಕ್‍ಗಳು ಟ್ರೋಲಿಂಗ್ ನಿಷೇಧ ಕಾಲಾವಧಿಯಲ್ಲಿ ಮುಚ್ಚುಗಡೆಗೊಳ್ಳಲಿದೆ.
ಟ್ರೋಲಿಂಗ್ ನಿಷೇಧ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಲು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ ವಿ ಸತೀಶನ್ ಟ್ರೋಲಿಂಗ್ ನಿಷೇಧದ ಬಗ್ಗೆ ಮಾಹಿತಿ ನೀಡಿದರು. ತಳಂಗರ, ಕುಂಬಳೆಮ ಅಯಿತ್ತಲ ಕರಾವಳಿ ಪೆÇಲೀಸ್ ಠಾಣಾಧಿಕಾರಿಗಳು ಉಪಸ್ಥಿತರಿದ್ದರು. ಟ್ರಾಲಿಂಗ್ ನಿಷೇಧ ಜಾರಿಗೆ ಮೊದಲು ಒತರ ರಾಜ್ಯದ ಮೀನುಗಾರಿಕಾ ಬೋಟ್‍ಗಳು ನಿರ್ಗಮಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೂ ತೀರ್ಮಾನಿಸಲಾಯಿತು.