ಮುಂಬೈ : ಇಬ್ಬರು ಪೈಲಟ್ ಸೇರಿದಂತೆ ಒಂಬತ್ತು ಜನ ಪ್ರಯಾಣಿಸುತ್ತಿದ್ದ ಒಎನ್‌ಜಿಸಿ ಹೆಲಿಕಾಪ್ಟರ್ ಇಲ್ಲಿನ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಪತನಗೊಂಡಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ : ಇಬ್ಬರು ಪೈಲಟ್ ಸೇರಿದಂತೆ ಒಂಬತ್ತು ಜನ ಪ್ರಯಾಣಿಸುತ್ತಿದ್ದ ಒಎನ್‌ಜಿಸಿ ಹೆಲಿಕಾಪ್ಟರ್ ಇಲ್ಲಿನ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಪತನಗೊಂಡಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಪಡೆ ಮತ್ತು ಕರಾವಳಿ ಕಾವಲು ಪಡೆ ರಕ್ಷಣಾ ಜಂಟಿ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ರಕ್ಷಿಸಿವೆ.
ಕಂಪನಿಗೆ ಕೆಲಸ ಮಾಡುವ ಗುತ್ತಿಗೆದಾರನಿಗೆ ಸೇರಿದ ಹೆಲಿಕಾಪ್ಟರ್, ಒಎನ್‌ಜಿಸಿಯ ಆರು ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವೇಳೆ ಮುಂಬೈ ಕರಾವಳಿಯಿಂದ 50 ನಾಟಿಕಲ್ ಮೈಲಿ ದೂರದಲ್ಲಿರುವ ರಿಗ್‌ನಲ್ಲಿ ಇಳಿಸಲು ಪ್ರಯತ್ನಿಸುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಒಎನ್‌ಜಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬದುಕುಳಿದ ನಾಲ್ವರನ್ನು ನೌಕಪಡೆ ಹೆಲಿಕಾಪ್ಟರ್‌ನಲ್ಲಿ ಒಎನ್‌ಜಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪಿಆರ್‌ಒ ಟ್ವೀಟ್ ಮಾಡಿದ್ದಾರೆ.