ತಿರುವನಂತಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ನಿನ್ನೆ ಬರೋಬ್ಬರಿ 1161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಬಾಧಿಸಿ ನಿನ್ನೆ ಐವರು ಮೃತರಾಗಿದ್ದಾರೆ. ಟಿ ಆರ್ ಪಿ ದರ 7 ಶೇ. ಕ್ಕಿಂತ ಹೆಚ್ಚಿದೆ. 677 ಮಂದಿ ಗುಣಮುಖರಾಗಿದ್ದಾರೆ.
ಎರ್ನಾಕುಳಂನಲ್ಲಿ 365 ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಮೃತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ.
ಮಾರ್ಚ್ 15 ರಿಂದ ಮೊದಲ ಬಾರಿಗೆ ಕೊರೋನಾ ಪ್ರಕರಣಗಳ ಸಂಖ್ಯೆ 1,000 ದಾಟಿದೆ. ಮೇ 13 ರ ಹೊತ್ತಿಗೆ, ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ 500 ದಾಟಿದೆ. 25ರ ವೇಳೆಗೆ 783ಕ್ಕೆ ತಲುಪಿತ್ತು. 27, 28 ಮತ್ತು 29 ರಂದು ಕೊರೋನಾ 800 ಕ್ಕಿಂತ ಹೆಚ್ಚಿತ್ತು.