ನವದೆಹಲಿ: ದೇಶದ ಆರ್ಥಿಕತೆಯ ದಿಕ್ಕನ್ನು ನಿರ್ಧರಿಸುವಂಥ ಮಹತ್ವದ ಸಭೆಯೊಂದು ಆರಂಭಗೊಂಡಿದ್ದು, ಭಾರತದ ಆರ್ಥಿಕ ವಲಯದ ಗಮನ ಈ ಸಭೆಯ ಮೇಲಿದ್ದು, ಆರ್ಥಿಕ ಪರಿಣತರು ಮತ್ತು ಉದ್ಯಮ ಕ್ಷೇತ್ರದ ಮಂದಿ ಇದರ ನಿರ್ಣಯಗಳತ್ತ ಕುತೂಹಲಭರಿತ ನಿರೀಕ್ಷೆ ಹೊಂದಿದ್ದಾರೆ.

ಹೌದು.. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಲ್ಲಿ (ಜಿಎಸ್ಟಿ) ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ನಿರೀಕ್ಷಿಸಲಾಗಿರುವ ಜಿಎಸ್ಟಿ ಮಂಡಳಿಯ 47ನೇ ಸಭೆ ಚಂಡೀಗಢದಲ್ಲಿ ನಿನ್ನೆ ಆರಂಭಗೊಂಡಿದ್ದು, ಇಂದೂ ನಡೆಯಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದಾರೆ.
ರಾಜ್ಯಗಳಿಗೆ ತೆರಿಗೆ ಸಂಗ್ರಹದಲ್ಲಾಗುತ್ತಿರುವ ಕೊರತೆಗೆ ಪರಿಹಾರ ನೀಡಿಕೆ ನಿರ್ಧಾರವನ್ನು ಈ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಕೆಲವು ವಸ್ತುಗಳ ತೆರಿಗೆ ಏರಿಕೆ ಹಾಗೂ ತೆರಿಗೆ ಸ್ಲ್ಯಾಬ್ಗಳ ವಿಲೀನದ ಬಗ್ಗೆ ನಿರ್ಣಯವಾಗುವ ಸಾಧ್ಯತೆಯೂ ಇದೆ ಎಂದು ನಿರೀಕ್ಷಿಸಲಾಗಿದೆ.