ಮುಂಬೈ: ವಿವಾದಿತ ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿರುವ ಅವರ ನಿವಾಸದಿಂದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅವರನ್ನು ಬಂಧಿಸಿದೆ. ಗೋಧ್ರಾ ನಂತರದ ಗಲಭೆಗಳಿಗೆ ಸಂಬಂಧಿಸಿದಂತೆ ಪ್ರಚೋದನಕಾರಿ ವರದಿ ಮತ್ತು ಝಕಿಯಾ ಜಾಫ್ರಿಯೊಂದಿಗೆ ನಂಟು ಇಟ್ಟು ನ್ಯೆಜೆಯನ್ನು ತಿರುಚಿ ಸುದ್ದಿ ಪ್ರಸಾರ ಮಾಡಿದ ಆರೋಪದ ಕಾರಣ ಬಂಧಿಸಲಾಯಿತು. ತೀಸ್ತಾ ಅವರು ಗೋಧ್ರಾ ನಂತರದ ಗಲಭೆಗಳಿಗೆ ಸಂಚು ರೂಪಿಸಿದ್ದರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅವರನ್ನು ವಿಚಾರಣೆಗಾಗಿ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ.
ಗೋಧ್ರಾ ನಂತರದ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿಲ್ಲ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನಿನ್ನೆ ಎತ್ತಿ ಹಿಡಿದಿತ್ತು. ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈ ಮೂಲಕ ತಿರಸ್ಕರಿಸಿದೆ. ಗಲಭೆಗೆ ಸಂಬಂಧಿಸಿದಂತೆ ತೀಸ್ತಾ ದೊಡ್ಡ ಪ್ರಮಾಣದಲ್ಲಿ ಸುಳ್ಳು ಪ್ರಚಾರ ನಡೆಸಿದ್ದರು. ಸುಳ್ಳು ಸುದ್ದಿ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಹಲವು ಆರೋಪಗಳಿವೆ.