ಮುಳ್ಳೇರಿಯ : ಜಿ. ಎಚ್. ಎಚ್. ಎಸ್. ಎಸ್. ಪಾಂಡಿಯಲ್ಲಿ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ ಸರಳವಾಗಿ ನಡೆಯಿತು. ಪ್ರಾಂಶುಪಾಲ ಸಂಶುದ್ದೀನ್ ಅವರು ಸ್ವಾಗತಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಂಶುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸ್ಮಿತಾರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಹೊಸದಾಗಿ ದಾಖಲಾದ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದರು. ಪಾಂಡಿ ವಾರ್ಡ್ ಸದಸ್ಯ ಟಿ. ಕೆ. ದಾಮೋದರನ್, ಎಸ್. ಮ್. ಸಿ. ಅಧ್ಯಕ್ಷ ದಿವಾಕರನ್ ಪಾಂಡಿ, ಹಿರಿಯ ಶಿಕ್ಷಕರಾದ ಸತ್ಯಶಂಕರ್ ಮೊದಲಾದವರು ಶುಭಾಶಂಸನೆಗೈದರು.
ಆಕರ್ಷಕ ಚೆಂಡೆ ವಾದನ ಮತ್ತು ಬಲೂನ್‍ನೊಂದಿಗೆ ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಸ್ವಾಗತಿಸಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅಕ್ಷರ ದೀಪದ ಸಂಕೇತವಾಗಿ ಮೇಣದ ಬತ್ತಿಗಳನ್ನು ವಿದ್ಯಾರ್ಥಿಗಳಿಂದ ಬೆಳಗಿಸಲಾಯಿತು. ಈ ಸಂದರ್ಭ ದಲ್ಲಿ ಸ್ಥಳೀಯ ಡಿ.ವೈ.ಎಫ್.ಐ ಸಂಘಟನೆಯ ಸದಸ್ಯರು ಡ್ರಾಯಿಂಗ್ ಪುಸ್ತಕ ಮತ್ತು ಕ್ರೇಯಾನ್ಸ್ ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ, ಮಕ್ಕಳ ಪೆÇೀಷಕರು ಶಾಲಾ ವಿವಿಧ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.