ವಡೋದರಾ: ಅಲ್ಲಿ ಮದುವೆ ನಡೆಯುತ್ತೆ. ಮದುವೆ ಶಾಸ್ತ್ರಗಳೆಲ್ಲವೂ ಇರುತ್ತೆ. ಮದುವೆ ಬಳಿಕ ಹನಿಮೂನ್ ಕೂಡ ಆಗುತ್ತೆ. ಆದ್ರೆ ಅಲ್ಲಿ ಮದುವೆಯ ವರ ಮಾತ್ರ ಇರುವುದಿಲ್ಲ. ಅರೆ! ಇದೇನು ಅಂತ ನಿಮಗೆ ಅಚ್ಚರಿಯಾಗಬಹುದು. ಆದರೆ ಹೀಗೂ ಒಂದು ಮದುವೆ ಜೂನ್ 11ರಂದು ನಡೆಯಲಿದೆ. ಗುಜರಾತ್ ನ ವಡೋದರಾ ಇಡೀ ದೇಶದಲ್ಲೇ ಇಂತಹ ಮೊದಲ ಮದುವೆಯನ್ನ ನೋಡಲಿದೆ.
ವಡೋದರಾ ಮೂಲದ 24 ವರ್ಷದ ಕ್ಷಮಾ ಬಿಂದು ಜೂನ್ 21ರಂದು ತಮ್ಮನ್ನು ತಾವೇ ಮದುವೆಯಾಗಲಿದ್ದಾರೆ. ಈ ಮೂಲಕ ಇಡೀ ದೇಶದಲ್ಲಿ ಮೊದಲ ಸೋಲೋಗಮಿ ಆಗಲಿದ್ದಾರೆ. ಜೂನ್ 11ರಂದು ನಿಗದಿಯಾಗಿರುವ ವಿವಾಹದಲ್ಲಿ ಮದುವೆಯ ಎಲ್ಲಾ ಶಾಸ್ತ್ರಗಳು ನಡೆಯಲಿವೆ. ನಂತರ ಕ್ಷಮಾ ಬಿಂದು ಹನಿಮೂನ್ ಗೆ ಗೋವಾಗೆ ಹೋಗಲಿದ್ದಾರೆ.
ತನ್ನ ವಿವಾಹದ ಬಗ್ಗೆ ಮಾತನಾಡುತ್ತಾ ಗುಜರಾತ್‌ನಲ್ಲಿ ಸ್ವಯಂ-ವಿವಾಹ ಮೊದಲ ನಿದರ್ಶನವೆಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಬಿಂದು ತನ್ನ ನಿರ್ಧಾರವನ್ನು ಸ್ವಯಂ-ಪ್ರೀತಿಯ ಕ್ರಿಯೆ ಎಂದು ವಿವರಿಸಿದ್ದಾರೆ. ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ನಾನು ವಧು ಆಗಲು ಬಯಸಿದ್ದೆ. ಹಾಗಾಗಿ ನಾನೇ ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದರು.
ನಾನು ಆನ್‌ಲೈನ್‌ನಲ್ಲಿ ಸ್ವಯಂ ಮದುವೆ ಬಗ್ಗೆ ಸಾಕಷ್ಟು ಹುಡುಕಿದೆ. ಆದರೆ ನಿದರ್ಶನಗಳನ್ನು ನನಗೆ ಸಿಗಲಿಲ್ಲ. ಬಹುಶಃ ನಮ್ಮ ದೇಶದಲ್ಲಿ ಸ್ವಯಂ-ಪ್ರೀತಿಯ ಉದಾಹರಣೆಯನ್ನು ನೀಡಿದವರಲ್ಲಿ ನಾನು ಮೊದಲನೆಯಳಾಗಿರುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನು 'ಸ್ವಯಂ-ಸ್ವೀಕಾರದ ಕ್ರಿಯೆ' ಎಂದು ಕರೆದ ವಧು, ಸ್ವಯಂ-ವಿವಾಹವು ನಿಮಗಾಗಿ ಇರಲು ಬದ್ಧತೆ ಮತ್ತು ತನಗಾಗಿ ಬೇಷರತ್ತಾದ ಪ್ರೀತಿಯಾಗಿದೆ. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ ಆದ್ದರಿಂದ ಈ ಮದುವೆ ನಡೆಯುತ್ತಿದೆ. ಸ್ವಯಂ-ವಿವಾಹವನ್ನು ಕೇವಲ ಗಿಮಿಕ್ ಎಂದು ಕರೆಯುವವರನ್ನು ಉದ್ದೇಶಿಸಿ ನಾನು ನಿಜವಾಗಿ ಮಹಿಳೆಯರ ವಿಷಯವನ್ನು ಬಿಂಬಿಸುತ್ತಿದ್ದೇನೆ ಎಂದರು.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕ್ಷಮಾ ಬಿಂದು ಅವರ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ ಎಂದು ಹೇಳಿದರು. ಎಲ್ಲಾ ವಿಧಿವಿಧಾನಗಳನ್ನು ಅನುಸರಿಸುವುದರ ಜೊತೆಗೆ, ವಧು ಸ್ವತಃ ಐದು ಪ್ರತಿಜ್ಞೆಗಳನ್ನು ಸಹ ಕೈಗೊಳ್ಳಲಿದ್ದಾರೆ. ತನ್ನ ವಿವಾಹ ಸಮಾರಂಭದ ನಂತರ, ಬಿಂದು ಕೂಡ ಗೋವಾದಲ್ಲಿ ಎರಡು ವಾರಗಳ ಹನಿಮೂನ್‌ಗೆ ಹೋಗಲಿದ್ದಾರೆ.