HEALTH TIPS

ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್‌: ಎನ್‌ಟಿಎಜಿಐ ಚರ್ಚೆ ಸಾಧ್ಯತೆ

 ನವದೆಹಲಿ: ಕೋವಿಡ್-19 ವಿರುದ್ಧ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್‌ ಸಂಪೂರ್ಣ ಲಸಿಕೆ ಪಡೆದವರಿಗೆ ಬಯಾಲಾಜಿಕಲ್-ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರ್ಬೆವ್ಯಾಕ್ಸ್ ಅನ್ನು ಬೂಸ್ಟರ್ ಆಗಿ ನೀಡಲು ಅನುಮತಿಸುವುದು, ಎರಡನೇ ಡೋಸ್ ಮತ್ತು ಬೂಸ್ಟರ್‌ ಡೋಸ್ ನಡುವಿನ ಅಂತರ ಆರು ತಿಂಗಳಿಗೆ ಇಳಿಸುವ ಬಗ್ಗೆ ಶೀಘ್ರವೇ ನಡೆಯಲಿರುವ ಎನ್‌ಟಿಎಜಿಐ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ಸದ್ಯದ ನಿಯಮದಂತೆ 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಲಸಿಕೆಯ ಎರಡನೇ ಡೋಸ್ ಪೂರ್ಣಗೊಳಿಸಿದವರು ಒಂಬತ್ತು ತಿಂಗಳು ಪೂರ್ಣಗೊಳಿಸಿದ ನಂತರ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದೆ.

ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಎರಡು ಡೋಸ್‌ಗಳನ್ನು ಪಡೆದ 18 ವರ್ಷ ಮೇಲ್ಪಟ್ಟವರಿಗೂ ಮೂರನೇ ಡೋಸ್ (ಬೂಸ್ಟರ್‌ ಡೋಸ್‌) ಆಗಿ ಕೊರ್ಬೆವ್ಯಾಕ್ಸ್ ಲಸಿಕೆಗೆ ಭಾರತೀಯ ಔಷಧ ಮಹಾ ನಿಯಂತ್ರಕ (ಡಿಸಿಜಿಐ) ಕಳೆದ ಭಾನುವಾರಷ್ಟೇ ಅನುಮತಿ ನೀಡಿದೆ. 5ರಿಂದ 12ರ ವಯಸ್ಸಿನ ಮಕ್ಕಳಿಗೆ ನೀಡಿರುವ ಕೊರ್ಬೆವ್ಯಾಕ್ಸ್‌ ಲಸಿಕೆಗಳ ಅಂಕಿ-ಅಂಶಗಳನ್ನು ಎನ್‌ಟಿಎಜಿಐ ಸಲಹಾ ಸಮಿತಿ ಪರಿಶೀಲಿಸಲಿದೆ ಎಂದು ಮೂಲಗಳು ಹೇಳಿವೆ.

ಕೊರ್ಬೆವ್ಯಾಕ್ಸ್ 12ರಿಂದ 14 ವರ್ಷದ ಮಕ್ಕಳಿಗೆ ದೇಶದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ ಎನಿಸಿದೆ. ಬೇರೆ ಕಂಪನಿಗಳ ಮೊದಲ ಎರಡು ಡೋಸ್‌ ಲಸಿಕೆಗಳನ್ನು ಪಡೆದಿರುವ ವ್ಯಕ್ತಿಗೆ ಮತ್ತೊಂದು ಕಂಪನಿಯ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲು ದೇಶದಲ್ಲಿ ಅನುಮತಿ ಸಿಕ್ಕಿರುವುದು ಇದೇ ಮೊದಲು.

ಕೋವಿಡ್‌: 3,714 ಹೊಸ ಪ್ರಕರಣ ದೃಢ
ದೇಶದಾದ್ಯಂತ ಮಂಗಳವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಹೊಸದಾಗಿ 3,714 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಸೋಮವಾರಕ್ಕೆ (4,518) ಹೋಲಿಸಿದರೆ ಈ ಪ್ರಮಾಣ ತುಸು ಕಡಿಮೆಯಾಗಿದೆ.

ಈ ಅವಧಿಯಲ್ಲಿ 7 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೆ 4.31 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಒಟ್ಟು 5,24,708 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,976ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

'ಕೆಮ್ಮು, ನೆಗಡಿಗೆ ಚೀಟಿ ರಹಿತ ಔಷಧ'
ಕೆಮ್ಮು, ಶೀತ, ನೋವು ನಿವಾರಕ ಹಾಗೂ ಚರ್ಮದ ತುರಿಕೆ ಶಮನಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರಾಸಿಟಮಾಲ್, ಮೂಗಿನ ಡ್ರಾಪ್ಸ್‌ ಮತ್ತು ಫಂಗಸ್‌ ತಡೆಯುವ ಆಯಂಟಿಬಯಾಟಿಕ್‌ ಸೇರಿ 16 ಸಾಮಾನ್ಯ ಔಷಧಗಳು ವೈದ್ಯರ ಚೀಟಿ ಇಲ್ಲದೇ ಇನ್ನು ಮುಂದೆ ಔಷಧಾಲಯಗಳಲ್ಲಿ ಲಭಿಸಲಿವೆ.

ಕೇಂದ್ರ ಆರೋಗ್ಯ ಸಚಿವಾಲಯವು 1945ರ ಔಷಧ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದೆ. ಅಂತಹ 16 ಔಷಧಗಳನ್ನು ಶೆಡ್ಯೂಲ್ ಕೆ ಅಡಿಯಲ್ಲಿ ತರಲು ವೈದ್ಯರ ಪ್ರಿಸ್ಕ್ರಿಪ್ಷನ್‌ಗೆ ವಿನಾಯಿತಿ ನೀಡುವ ಮೂಲಕ, ಅವುಗಳನ್ನು ಮಾನ್ಯತೆಯ ಚಿಲ್ಲರೆ ಔಷಧ ಮಾರಾಟಗಾರರು 'ಓವರ್‌ -ದಿ-ಕೌಂಟರ್‌ (ಒಟಿಸಿ)' ವರ್ಗದಲ್ಲಿ ಮಾರಾಟ ಮಾಡಬಹುದಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಕೋರಿ ಆರೋಗ್ಯ ಸಚಿವಾಲಯ ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries