ನವದೆಹಲಿ: ಬಾಡಿಗೆ ತಾಯ್ತನ ವಿಧಾನದ ಮೂಲಕ ಮಕ್ಕಳನ್ನು ಹೊಂದಲು ಬಯಸುವ ದಂಪತಿ, ಬಾಡಿಗೆ ತಾಯಿ ಹೆಸರಿನಲ್ಲಿ ಮೂರು ವರ್ಷಗಳ ಅವಧಿಯ ಆರೋಗ್ಯ ವಿಮೆ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ನವದೆಹಲಿ: ಬಾಡಿಗೆ ತಾಯ್ತನ ವಿಧಾನದ ಮೂಲಕ ಮಕ್ಕಳನ್ನು ಹೊಂದಲು ಬಯಸುವ ದಂಪತಿ, ಬಾಡಿಗೆ ತಾಯಿ ಹೆಸರಿನಲ್ಲಿ ಮೂರು ವರ್ಷಗಳ ಅವಧಿಯ ಆರೋಗ್ಯ ವಿಮೆ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಗರ್ಭ ಧರಿಸಿದ ಅವಧಿ ಹಾಗೂ ಹೆರಿಗೆ ನಂತರ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಈ ಪಾಲಿಸಿಯ ವಿಮಾ ಮೊತ್ತ ಸರಿದೂಗಿಸುವಂತಿರಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆಯ ನಿಯಮಗಳಿಗೆ ಸಂಬಂಧಿಸಿ ಸಚಿವಾಲಯ ಜೂನ್ 21ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ.
ಬಾಡಿಗೆ ತಾಯಿಯಾಗಲು ಒಪ್ಪಿಕೊಂಡವರು ಗರಿಷ್ಠ ಮೂರು ಬಾರಿ ಬಾಡಿಗೆ ತಾಯ್ತನ ವಿಧಾನಕ್ಕೆ ಒಳಗಾಗಬಹುದು. ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ, ಗರ್ಭಪಾತ ಮಾಡಿಸಿಕೊಳ್ಳಲು ಅವರಿಗೆ ಅನುಮತಿ ನೀಡಬೇಕು ಎಂದೂ ನಿಯಮದಲ್ಲಿ ಹೇಳಲಾಗಿದೆ.