HEALTH TIPS

ಆಟೋಡ್ರೈವರ್​ನಿಂದ 'ಮಹಾ' ಸಿಎಂ ಖುರ್ಚಿಯವರೆಗೆ. ಬಾಳಾಸಾಹೇಬರ ಶಿಷ್ಯನ ಕುತೂಹಲದ ಪಯಣವಿದು

         ಮುಂಬೈ: ಕಳೆದ ಕೆಲ ದಿನಗಳಿಂದ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿತ್ತು ಮಹಾರಾಷ್ಟ್ರದ ರಾಜಕೀಯ. ಶಿವಸೇನೆಯ ನಾಯಕ ಏಕನಾಥ್​ ಶಿಂಧೆ ಏಕಾಏಕಿ ಬಂಡಾಯವೆದ್ದು, ಶಾಸಕರು ಹಾಗೂ ಸಚಿವರನ್ನು ತನ್ನೆಡೆ ಸೆಳೆದುಕೊಂಡಾಗಿನಿಂದ ಹಿಡಿದು, ಸಿಎಂ ಆಗಿದ್ದ ಉದ್ಧವ್​ ಠಾಕ್ರೆ ಅವರಿಗೆ ಬಹುಮತ ಸಾಬೀತು ಮಾಡುವಂತೆ ಸುಪ್ರೀಂಕೋರ್ಟ್​ ಸೂಚಿಸಿದ್ದವರೆಗೆ ಕುತೂಹಲ ಮೂಡಿತ್ತು.

          ಬಹುಮತ ಸಾಬೀತು ಪಡಿಸುವ ಮೊದಲೇ ಸಂಖ್ಯೆಯ ಜತೆ ಆಟವಾಡಲಾರೆ ಎಂದು ಕೈಚೆಲ್ಲಿದ್ದ ಉದ್ಧವ್​ ಠಾಕ್ರೆ ಫೇಸ್​ಬುಕ್​ ಲೈವ್​ನಲ್ಲಿ ಬಂದು ಜೂನ್​ 29 ರಾತ್ರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.  ಬೆಳಗ್ಗೆ ರಾಜ್ಯಪಾಲರು ಅದನ್ನು ಅಂಗೀಕರಿಸಿದರೂ ಕೂಡ.

            ಆದರೆ ಮತ್ತು ಕುತೂಹಲವೆನಿಸಿದ್ದು, ಯಾರಾಗಲಿದ್ದಾರೆ ಸಿಎಂ ಎಂಬುದು. ಇಂದು ಇಂದು ಸಂಜೆ ಐದು ಗಂಟೆಯವರೆಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಪಡ್ನವಿಸ್​ ಅವರೇ ಅಧಿಕಾರ ಸ್ವೀಕಾರ ಮಾಡಲಿದ್ದು, ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಇದಕ್ಕೆ ಭಾರಿ ಟ್ವಿಸ್ಟ್​ ಸಿಕ್ಕು ಫಡ್ನವಿಸ್​ ಅವರೇ ಪತ್ರಿಕಾಗೋಷ್ಠಿ ನಡೆಸಿ, ಸಿಎಂ ಸ್ಥಾನವನ್ನು ಶಿಂಧೆ ಅವರಿಗೆ ಬಿಟ್ಟುಕೊಟ್ಟಿರುವುದಾಗಿ ಘೋಷಿಸಿದ್ದರು. ರಾತ್ರಿ 7.30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

                       ಯಾರೀ ಏಕನಾಥ ಶಿಂಧೆ?
         ಮಹಾರಾಷ್ಟ್ರ ಸರ್ಕಾರವನ್ನು ಅಲ್ಲಾಡಿಸಿ, ಕೊನೆಗೆ ಉದ್ಧವ್​ ಠಾಕ್ರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಮುಖ್ಯಮಂತ್ರಿ ಖುರ್ಚಿಯನ್ನೇರಲು ರೆಡಿಯಾಗಿರುವ ಈ ಶಿಂಧೆ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲವಿದ್ದರೆ, ಇಲ್ಲಿದೆ ನೋಡಿ ಮಾಹಿತಿ:

               ಏಕನಾಥ್​ ಶಿಂಧೆ ಅವರಿಗೆ ಈಗ 56 ವರ್ಷ ವಯಸ್ಸು. ಮೂಲತಃ ಇವರು ಆಟೋ ಚಾಲಕ. ಕುತೂಹಲದ ಸಂಗತಿ ಎಂದರೆ, ಉದ್ಧವ್ ಠಾಕ್ರೆ ಅವರ ತಂದೆ ಬಾಳಾಸಾಹೇಬ್ ಠಾಕ್ರೆ ಏಕನಾಥ್ ಶಿಂಧೆ ಅವರ ರಾಜಕೀಯ ಗುರು. ಇದೀಗ ಅವರೇ ಉದ್ಧವ್​ ಠಾಕ್ರೆಯ ಖುರ್ಚಿಯನ್ನು ಏರಲು ಸಿದ್ಧರಾಗಿದ್ದಾರೆ.

ಏಕನಾಥ್ ಶಿಂಧೆ ಮಹಾರಾಷ್ಟ್ರದ ಸತಾರಾ ನಿವಾಸಿ. ರಾಜಕೀಯ ವಿದ್ಯಾರ್ಥಿಯಾಗಿರುವ ಇವರು, ಬಾಳಾಸಾಹೇಬ್​ ಠಾಕ್ರೆ ಅವರನ್ನು ಗುರುವಾಗಿ ಸ್ವೀಕರಿಸಿದ್ದರು. ರಾಜಕೀಯದಲ್ಲಿಯೇ ಮುಂದುವರೆಯಬೇಕು ಎನ್ನುವ ಕಾರಣಕ್ಕೆ ಸತಾರಾವನ್ನು ತೊರೆದು ಶಿವಸೇನೆಯ ಪ್ರಮುಖ ನೆಲೆಯಾದ ಥಾಣೆಗೆ ತೆರಳಿದರು.

            ಶಿವಸೇನೆ ಸೇರುವ ಮುನ್ನ ಶಿಂಧೆ ಬಹಳ ಕಾಲ ಕಾರು ಓಡಿಸುತ್ತಿದ್ದರು. ಪಕ್ಷದ ಕಾರ್ಯಕರ್ತರ ಸಂಘವನ್ನೂ ಆರಂಭಿಸಿದರು. 1980 ರ ದಶಕದಲ್ಲಿ ಥಾಣೆಯಲ್ಲಿ ಶಾಖಾ ಮುಖ್ಯಸ್ಥರಾಗಿದ್ದ ಶಿಂಧೆ 2004 ರಲ್ಲಿ ಶಾಸಕರಾಗುವ ಮೊದಲು ಥಾಣೆ ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದರು. ಶಿಂಧೆ ಅವರು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ ಮತ್ತು ಮೂರು ವರ್ಷಗಳಿಂದ ನಾಗರಿಕ ಸಂಸ್ಥೆ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ. ಅವರು ನಾಲ್ಕು ವರ್ಷಗಳ ಕಾಲ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದನದ ನಾಯಕರಾಗಿ ಸೇವೆ ಸಲ್ಲಿಸಿದರು.

            2004 ರಿಂದ, ಅವರು ಸತತ ನಾಲ್ಕು ಚುನಾವಣೆಗಳನ್ನು ಗೆದ್ದಿದ್ದಾರೆ, ಅವರ ಮಗ ಶ್ರೀಕಾಂತ್ ಶಿಂಧೆ ಕಲ್ಯಾಣ್‌ನಿಂದ ಸೇನಾ ಸಂಸದರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries