HEALTH TIPS

ಕುತುಬ್‌ ಮಿನಾರ್‌ ನಿರ್ಮಾಣಗೊಂಡಿದ್ದು ಮುಘಲರ ಕಾಲದಲ್ಲೇ? ಇತಿಹಾಸ ಹೇಳುವುದೇನು?

 ನವದೆಹಲಿ: ಮುಘಲರು ಭಾರತಕ್ಕೆ ಹೆಜ್ಜೆ ಇಡುವ ಮೊದಲೇ ಸುಮಾರು 300 ವರ್ಷಗಳ ಹಿಂದೆ ಕುತುಬ್‌ ಮಿನಾರ್‌ ಅನ್ನು ನಿರ್ಮಿಸಲಾಗಿದೆ. ಈ ವಿಚಾರದಲ್ಲಿ ಮುಘಲರಿಗೂ ಕುತುಬ್‌ ಮಿನಾರ್‌ಗೂ ಸಂಬಂಧವಿಲ್ಲ ಎಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ.

ಮುಘಲರ ಕಾಲದಲ್ಲಿ ಕುತುಬ್‌ ಮಿನಾರ್‌ ನಿರ್ಮಾಣಗೊಂಡಿದೆ ಎಂದು ಕೆಲವು ಟಿವಿ ವಾಹಿನಿಗಳು, ವೆಬ್‌ಸೈಟ್‌ಗಳು ಸುದ್ದಿ ಪ್ರಸಾರ ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ಈ ವಿಚಾರ ಹರಿದಾಡಿತ್ತು.

ಮುಘಲರ ಕಾಲದಲ್ಲಿ ಕುತುಬ್‌ ಮಿನಾರ್‌ ನಿರ್ಮಾಣಗೊಂಡಿದೆ ಎಂಬುದು ತಪ್ಪು ಮಾಹಿತಿ. 72.5 ಮೀಟರ್‌ ಎತ್ತರವಿರುವ ಮಿನಾರ್‌ನ ಕಾರ್ಯವು 13ನೇ ಶತಮಾನದಲ್ಲಿ ಪೂರ್ಣಗೊಂಡಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.

ಭಾರತದಲ್ಲಿ 'ಗುಲಾಮಿ ವಂಶಾಡಳಿತ' ಸ್ಥಾಪಿಸಿದ ಕುತ್ಬುದ್ದಿನ್‌ ಐಬಕ್‌ 1193ರಲ್ಲಿ ಕುತುಬ್‌ ಮಿನಾರ್‌ ನಿರ್ಮಿಸಲು ಆರಂಭಿಸಿದ. 1526ರಲ್ಲಿ ನಡೆದ ಮೊದಲ ಪಾಣಿಪತ್‌ ಕದನದಲ್ಲಿ ಲೋಧಿ ರಾಜ ಇಬ್ರಾಹಿಂ ಖಾನ್‌ ಲೋಧಿಯನ್ನು ಬಾಬರ್‌ ಸೋಲಿಸಿದ ನಂತರ ಮುಘಲರ ಪ್ರವೇಶವಾಯಿತು ಎಂದು ಇತಿಹಾಸಕಾರರು ತಿಳಿಸಿದ್ದಾರೆ.

ವಾಲ್ಮೀಕಿ 'ದಾರಿಗಳ್ಳನಾಗಿದ್ದ' ಎಂದು ಅಪಮಾನ: ಪಠ್ಯ ವಾಪಸ್‌ಗೆ ತೀವ್ರಗೊಂಡ ಒತ್ತಾಯ

ಆದರೆ ಕುತ್ಬುದ್ದಿನ್‌ ಐಬಕ್‌ನ ಅವಧಿಯಲ್ಲಿ ಮಿನಾರ್‌ನ ಅಡಿಪಾಯವಷ್ಟೇ ಪೂರ್ಣಗೊಂಡಿತು. 13ನೇ ಶತಮಾನದಲ್ಲಿ, ಐಬಕ್‌ನ ಮೊಮ್ಮಗ ಶಂಶುದ್ದಿನ್‌ ಇಲ್ತ್‌ಮಿಶ್‌ ಮಿನಾರ್‌ಗೆ ಮೂರು ಮಹಡಿಗಳನ್ನು ಸೇರ್ಪಡೆಗೊಳಿಸಿದ ಎಂದು ಇತಿಹಾಸಕಾರ ಎಸ್‌ ಇರ್ಫಾನ್‌ ಹಬಿಬ್‌ ಹೇಳಿದ್ದಾರೆ.

ಗುಲಾಮಿ ವಂಶಾಡಳಿತವು 1206ರಿಂದ 1290ರಲ್ಲಿ ಅಂತ್ಯಗೊಂಡಿತು. ಇದನ್ನು ಮಾಮ್‌ಲಕ್‌ ವಂಶಾಡಳಿತ ಎಂದೂ ಕರೆಯಲಾಗುತ್ತದೆ. ಇದನ್ನು ಸ್ಥಾಪಿಸಿದ್ದು ಕುತ್ಬುದ್ದಿನ್‌ ಐಬಕ್‌. ಟರ್ಕಿ ಕುಟುಂಬದಲ್ಲಿ ಜನಿಸಿದ್ದ ಈತ ಗುಲಾಮನಾಗಿ ಅಫ್ಘಾನಿಸ್ತಾನದ ಘೋರ್‌ ಆಡಳಿತಗಾರ ಮುಹಮ್ಮದ್‌ ಘೋರಿಗೆ ಮಾರಾಟಗೊಂಡಿದ್ದ. ಗುಲಾಮಿ ಯುಗದ ಬಳಿಕ ಖಿಲ್ಜಿಯರು, ತುಘಲಖ್‌ಗಳು, ಸಯ್ಯದ್‌, ಲೋಧಿ ವಂಶಾಡಳಿತ ಬಳಿಕ ಮುಘಲರು ಭಾರತಕ್ಕೆ ಬಂದರು. ಮುಘಲರು ಭಾರತಕ್ಕೆ ಬರುವ ಮೊದಲು ಹಲವು ದೊರೆಗಳ ಯುಗಗಳು ಬಂದು ಹೋಗಿವೆ. ಹಾಗಾಗಿ ಕುತುಬ್‌ ಮಿನಾರ್‌ ಅನ್ನು ಮುಘಲರ ಕಾಲದ್ದು ಎನ್ನುವುದು ತಪ್ಪು ಎಂದು ಹಬಿಬ್‌ ಹೇಳಿದ್ದಾರೆ.

ಕುತುಬ್‌ ಮಿನಾರ್‌ ಮುಘಲರ ಕಾಲದಲ್ಲಿ ಆಗಿದ್ದು ಎನ್ನುವವರಿಗೆ ನಮ್ಮ ಇತಿಹಾಸದ ಅರಿವಿಲ್ಲ. ಕಾಲದ ಪ್ರಜ್ಞೆಯಿಲ್ಲ. ಮುಸ್ಲಿಮರನ್ನು ಉದ್ದೇಶಿಸಿಯೇ ಮುಘಲರನ್ನು ಉಲ್ಲೇಖಿಸಲಾಗುತ್ತದೆ. ಇದಕ್ಕೆ ಮುಘಲರು ಮತ್ತು ಮುಸ್ಲಿಮರು ಎಂಬ ಪದಗಳು ಪರಸ್ಪರ ಹೊಂದುವ ಕಾರಣವೂ ಇರಬಹುದು ಎಂದು ಇತಿಹಾಸಕಾರ ಸೊಹೈಲ್‌ ಹಶ್ಮಿ ಹೇಳಿದ್ದಾರೆ.

ಇಲ್ತಿಮಿಶ್‌ ಮೂರು ಮಹಡಿಗಳನ್ನು ಏರಿಸಿದ ಬಳಿಕ ಹದಿನಾಲ್ಕನೇ ಶತಮಾನದಲ್ಲಿ ಎರಡು ಬಾರಿ ಸಿಡಿಲು ಬಡಿದು ಕಟ್ಟಡಕ್ಕೆ ಹಾನಿಯಾಗಿತ್ತು. ತುಘಲಖ್‌ ಕಾಲದಲ್ಲಿ ಪಿರೋಜ್‌ ಶಾ ತುಘಲಖ್‌ ನವೀಕರಣಗೊಳಿಸಿದ. ಮೊದಲ ಮೂರು ಮಹಡಿಗಳನ್ನು ಕೆಂಪುಕಲ್ಲಿನಿಂದ ನಿರ್ಮಿಸಲಾಗಿದೆ. ನಾಲ್ಕನೇ ಮತ್ತು ಐದನೇ ಮಹಡಿಗಳನ್ನು ಮಾರ್ಬಲ್‌ ಮತ್ತು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಅನುಕ್ರಮವಾಗಿ ಬ್ರಿಟಿಷರೂ ಹೆಚ್ಚಿನ ರಿಪೇರಿ ಕೆಲಸಗಳನ್ನು ಮಾಡಿದ್ದಾರೆ ಎಂದು ಹಶ್ಮಿ ವಿವರಿಸಿದ್ದಾರೆ.

ಕುತುಬ್‌ ಮಿನಾರ್‌ ನಿರ್ಮಾಣ ಕಾರ್ಯದಲ್ಲಾಗಲಿ, ರಿಪೇರಿ ಕೆಲಸಗಳಲ್ಲಾಗಲಿ ಮುಘಲರು ಕೈಹಾಕಿಲ್ಲ ಎಂದು ಹಶ್ಮಿ ಒತ್ತಿ ಹೇಳಿದ್ದಾರೆ.

1993ರಲ್ಲಿ ಕುತುಬ್‌ ಮಿನಾರ್‌ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries