ನವದೆಹಲಿ: ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಸಮಿತಿಗೆ ನಡೆಯಲಿರುವ ಮರುಚುನಾವಣೆಯಲ್ಲಿ ಭಾರತ ಸ್ಪರ್ಧಿಸಲಿದೆ ಎಂದು ಕೇಂದ್ರ ಸಂವಹನ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ನವದೆಹಲಿ: ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಸಮಿತಿಗೆ ನಡೆಯಲಿರುವ ಮರುಚುನಾವಣೆಯಲ್ಲಿ ಭಾರತ ಸ್ಪರ್ಧಿಸಲಿದೆ ಎಂದು ಕೇಂದ್ರ ಸಂವಹನ ಸಚಿವಾಲಯ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ವಿಶ್ವಸಂಸ್ಥೆಯ ದೂರಸಂಪರ್ಕ ಮಂಡಳಿಯ ಗುರಿಗಳು ಮತ್ತು ಸಂಪರ್ಕಿತ ಸಮುದಾಯಕ್ಕಾಗಿನ ದೃಷ್ಟಿಕೋನದ ಬಗೆಗೆ ಭಾರತ ಹೊಂದಿರುವ ಅಚಲವಾದ ಬದ್ಧತೆಯನ್ನು ಪ್ರಕಟಣಿಯಲ್ಲಿ ಒತ್ತಿಹೇಳಲಾಗಿದೆ.
ಚೌಹಾಣ್ ಅವರು ಮೇ 31ರಿಂದ ಜೂನ್ 3ರ ವರೆಗೆ ಸ್ವಿಟ್ಜರ್‌ಲ್ಯಾಂಡ್‌ನ ಜಿನಿವಾದಲ್ಲಿ ನಡೆದ 'ಮಾಹಿತಿ ಸಮಾಜದ ವಿಶ್ವ ಸಮಾವೇಶ'ದಲ್ಲಿ (ಡಬ್ಲ್ಯೂಎಸ್‌ಐಎಸ್) ಮಾತನಾಡಿದ್ದರು.
ಜಾಗತಿಕ ಡಿಜಿಟಲ್ ರೂಪಾಂತರ, ಅಭಿವೃದ್ಧಿಯಲ್ಲಿ ಉತ್ಕೃಷ್ಟತೆ ಕಾಪಾಡಿಕೊಳ್ಳುವುದು ಮತ್ತು ಐಸಿಟಿ ಬಳಿಕೆಯಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದ್ದರು.