ಕಾಸರಗೋಡು: ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೆಗಾ)ಯ ಕಾಸರಗೋಡು ಜಿಲ್ಲಾ ಓಂಬುಡ್ಸ್‍ಮೆನ್ ಆಗಿ ವಕೀಲ ವಿ.ಎ ನಸೀರ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ನರೆಗಾ ಯೋಜನೆ ಬಗೆಗಿನ ದೂರುಗಳು, ವ್ಯಾಜ್ಯಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಪು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲೂ ಓಂಬುಡ್ಸ್‍ಮೆನ್ ನೇಮಿಸಲಾಗುತ್ತಿದ್ದು, ಕೇರಳದ ಎಲ್ಲ 14 ಜಿಲ್ಲೆಗಳಲ್ಲೂ ಈ ನೇಮಕಾತಿ ನಡೆಸಲಾಗಿದೆ. ವಿ.ಎ ನಸೀರ್ ಅವರು ಸಾರ್ವಜನಿಕ ಆರೋಗ್ಯ(ಎಂಪಿಎಚ್), ಕಾನೂನು(ಎಲ್‍ಎಲ್‍ಎಂ), ಬಿಸಿನೆಸ್ ಮ್ಯಾನೇಜ್‍ಮೆಂಟ್(ಎಂಬಿಎ)ಪದವೀಧರರಾಗಿದ್ದು, ಕಾಸರಗೋಡಿನಲ್ಲಿ ಕೇರಳ ರಾಜ್ಯ ಸಿವಿಲ್ ಸರ್ವೀಸ್ ಅಕಾಡಮಿಯಲ್ಲಿ ಕಾನೂನು ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ತೃಕ್ಕರಿಪುರ ಉಡುಂಬಂತಲ ನಿವಾಸಿಯಾಗಿದ್ದಾರೆ.