ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಜೂನ್ 18 ರಂದು ನಡೆಸಲು ನಿಶ್ಚಯಿಸಲಾದ 'ಕಾಟುಕುಕ್ಕೆ ಯಕ್ಷೋತ್ಸವ' ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್ ಕಾಟುಕುಕ್ಕೆ, ಪ್ರಧಾನ ಅರ್ಚಕ ಮಧುಸೂದನ ಪುಣಿಂಚಿತ್ತಾಯ, ಟ್ರಸ್ಟಿಗಳಾದ ತಾರಾನಾಥ ರೈ, ಚನಿಯಪ್ಪ ಕೆ, ಪುರೋಹಿತ ಅನಂತರಾಜ ಭಟ್ ಮುಜೂರು, ರಾಮಕೃಷ್ಣ ಕಾಟುಕುಕ್ಕೆ, ಸಿಬ್ಬಂದಿ ಶಿವ ಪ್ರಸಾದ್ ರಾವ್, ಮತ್ತಿತರರು ಉಪಸ್ಥಿತರಿದ್ದರು.