ಕಾಸರಗೋಡು: ನೇತಾಜಿ ಸಉಭಾಶ್ಚಂದ್ರ ಬೋಸ್ ಅವರ ಅನುಯಾಯಿ, ತೃಕ್ಕರಿಪುರ ನಿವಾಸಿ ಕುಞÂರಾಮನ್ ಅವರ ಕುಟುಂಬದವರು ತೃಕ್ಕರಿಪುರದಲ್ಲಿ ನಿರ್ಮಿಸಿರುವ ನೇತಾಜಿ ಸುಭಾಸ್ಚಂದ್ರ ಬೋಸ್ ಕಾಂಕ್ರೀಟಿನ ಆಳೆತ್ತರದ ಪ್ರತಿಮೆ ಅನಾವರಣ ಸಮಾರಂಭ ಜೂ. 12ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ನೇತಾಜಿ ಸುಭಾಸ್ಚಂದ್ರ ಬೋಸ್ ಅವರ ಸಹೋದರ ಪುತ್ರ ಅರ್‍ದೇಂದು ಬೋಸ್ ಪ್ರತಿಮೆ ಅನಾವರಣಗೊಳಿಸುವರು ಎಂದು ಕುಞÂರಾಮನ್ ಅವರ ಪುತ್ರ, ಪ್ರತಿಮೆ ನಿರ್ಮಾತೃ ಡಾ. ಕೆ. ಸುಧಾಕರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಲಾವಿದ ಕೆ.ಕೆ ಮಾರಾರ್ ಅಧ್ಯಕ್ಷತೆ ವಹಿಸುವರು. ಸುಮಾರು ಏಳುವರೆ ಲಕ್ಷ ರೂ. ವೆಚ್ಚದಲ್ಲಿ ತೃಕ್ಕರಿಪುರದ ನಗರ ಮಧ್ಯೆಯಿರುವ ಡಾ. ಸುರೇಂದ್ರನ್ ಅವರ ಕಂಪೌಂಡ್‍ನಲ್ಲಿ ಪ್ರತಿಮೆ ನಿರ್ಮಿಸಲಾಗಿದೆ. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ಕ್ಕೆ ಮಕ್ಕಳಿಗಾಗಿ ಸುಭಾಶ್ಚಂದ್ರ ಬೋಸ್ ಅವರ ಚಿತ್ರ ರಚನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರವೀಂದ್ರನ್ ಕೆ, ಟಿ.ವಿ ಬಾಳಕೃಷ್ಣನ್, ಚಂದ್ರನ್ ಮುಟ್ಟತ್ ಉಪಸ್ಥಿತರಿದ್ದರು.