ಬೆಂಗಳೂರು: ಪಿಜ್ಜಾ ಡೆಲಿವರಿ ಮಹಿಳೆಗೆ ನಾಲ್ವರು ಯುವತಿಯರು ಸೇರಿಕೊಂಡು ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.
ಬೆಂಗಳೂರು: ಪಿಜ್ಜಾ ಡೆಲಿವರಿ ಮಹಿಳೆಗೆ ನಾಲ್ವರು ಯುವತಿಯರು ಸೇರಿಕೊಂಡು ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.
ನಂದಿನಿ ಯಾದವ್ ಎನ್ನುವ ಡೊಮಿನೋಸ್ ಮಿಜ್ಜಾ ಡೆಲಿವರಿ ಮಹಿಳೆ ಮನೆಯೊಂದಕ್ಕೆ ಪಿಜ್ಜಾ ತಲುಪಿಸಲು ಹೋಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ದೀಪಿಕಾ ಭಾರದ್ವಾಜ ಎನ್ನುವರು ವಿಡಿಯೊ ಹಂಚಿಕೊಂಡಿದ್ದು ಮಹಿಳೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಇತ್ತೀಚಿನ ವರ್ತಮಾನಗಳ ಪ್ರಕಾರ ನಂದಿನಿ ಯಾದವ್ ಯುವತಿಯರ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಪಿಜ್ಜಾ ಡೆಲಿವರಿ ಕೊಡುವಾಗ ಮಾತಿಗೆ ಮಾತು ಬೆಳೆದು ಯುವತಿಯರು ಹಲ್ಲೆ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.