ಫ್ಲೋರಿಡಾ: ಎರಡು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮೃತ ತಂದೆಯನ್ನು ರೆಗ್ಗಿ ಮಾಬ್ರಿ ಎಂದು ಗುರುತಿಸಲಾಗಿದೆ. ಮೂವರು ಮಕ್ಕಳು ಸೇರಿ ದಂಪತಿಗಳು ವಾಸಿಸುತ್ತಿದ್ದರು. ಈ ಮನೆಯಲ್ಲಿ ಪೋಷಕರು ಬಂದೂಕಿಗೆ ಗುಂಡು ಹಾಕಿ ಇಟ್ಟಿದ್ದರು. ಈ ವೇಳೆ ಮಗು ಬಂದೂಕು ಹಿಡಿದು ಆಟವಾಡುತ್ತಿತ್ತು. ಆದ್ರೆ, ಇದನ್ನು ಪೋಷಕರು ಗಮನಿಸಿರಲಿಲ್ಲ. ಸ್ವಲ್ಪ ಸಮಯದ ಹೊತ್ತಿಗೆ ಆಕಸ್ಮಿಕವಾಗಿ ಅದರಿಂದ ಹಾರಿದ ಗುಂಡು ತಂದೆಗೆ ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯ ವೇಳೆ ಐದು ತಿಂಗಳ ಹೆಣ್ಣು ಮಗು ಸೇರಿದಂತೆ ಐವರು ಕುಟುಂಬ ಸದಸ್ಯರು ಒಂದೇ ಕೋಣೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಪ್ರಾರಂಭದಲ್ಲಿ ಸ್ವತಃ ರೆಗ್ಗಿ ಮಾಬ್ರಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ತದನಂತರ ಮೂವರು ಮಕ್ಕಳಲ್ಲಿ ಎರಡು ವರ್ಷದ ಬಾಲಕ ಗುಂಡು ಹಾರಿಸಿರುವುದು ತಿಳಿದು ಬಂದಿತು ಎಂದು ಆರೆಂಜ್ ಕೌಂಟಿ ಶೆರಿಫ್ ಜಾನ್ ಮಿನಾ ಅವರು ತಿಳಿಸಿದ್ದಾರೆ.