HEALTH TIPS

ನಿಮ್ಮ ಮಕ್ಕಳ ಎತ್ತರ ಬೆಳವಣಿಗೆ ಆಗದಿರುವುದಕ್ಕೆ ಇವೇ ಕಾರಣಗಳು ನೋಡಿ!

 ನಮ್ಮ ಎತ್ತರ ಸಾಮಾನ್ಯವಾಗಿ ಒಂದು ಹಂತದವರೆಗೆ ಬೆಳವಣಿಗೆಯಾಗುತ್ತದೆ, ಅಂದರೆ ಸುಮಾರು 18ವರ್ಷಗಳವರೆಗೆ ನಾವು ಎತ್ತರವಾಗುತ್ತಾ ಹೋಗುತ್ತೇವೆ. ಆದರೆ, ಕೆಲವು ಮಕ್ಕಳಲ್ಲಿ ಈ ವಯಸ್ಸಿಗೆ ಮುನ್ನವೇ ಎತ್ತರದ ಬೆಳವಣಿಗೆ ನಿಂತುಬಿಡುವುದು ಅಥವಾ ತಮ್ಮ ವಯಸ್ಸಿಗೆ ಎಷ್ಟು ಎತ್ತರವಾಗಿರಬೇಕೋ ಅಷ್ಟು ಎತ್ತರವಾಗಿ ಬೆಳೆಯುವುದಿಲ್ಲ. ಇದಕ್ಕೆ ನಿಮ್ಮ ಆಹಾರ, ಜೀವನಶೈಲಿ ಮತ್ತು ಸಾಮಾನ್ಯ ಅಭ್ಯಾಸಗಳ ಜೊತೆಗೆ ಕೆಲವೊಂದು ಪ್ರಮುಖ ಕಾರಣಗಳಿರುತ್ತದೆ. ಅವುಗಳ ಗಮನಿಸಿ, ಅದಕ್ಕೆ ಸೂಕ್ತ ಪರಿಹಾರ ಒದಗಿಸುವುದು ಮುಖ್ಯ. ಹಾಗಾದರೆ, ಅಂತಹ ಕಾರಣಗಳಾವುವು ಎಂಬುದನ್ನು ನೋಡೋಣ.

1.ಕೌಟುಂಬಿಕ ಇತಿಹಾಸ ಹೌದು, ನಿಮ್ಮ ಕುಟುಂಬದಲ್ಲಿ ಕಡಿಮೆ ಎತ್ತರವಿರುವಂತಹ ಜನರಿದ್ದರೆ, ಅದು ನಿಮ್ಮ ಎತ್ತರದ ಮೇಲೂ ಪ್ರಭಾವ ಬೀರಬಹುದು. ಇದಕ್ಕೆ ಕಾರಣ, ನಿಮ್ಮ ಪೋಷಕರಿಂದ ನಿಮಗೆ ವರ್ಗಾವಣೆಯಾಗುವ ಆನುವಂಶಿಕ ಅಂಶ. ನಿಮ್ಮ ಮಗುವಿನ ಎತ್ತರವು ಇತರ ಮಕ್ಕಳಿಗಿಂತ ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ, ಅವರ ಎತ್ತರದ ಮೇಲೆ ಪರಿಣಾಮ ಬೀರುವ ಇತರ ಸ್ಥಿತಿಯನ್ನು ತಿಳಿದುಕೊಳ್ಳಲು ಶಿಶುವೈದ್ಯರನ್ನು ಸಂಪರ್ಕಿಸಬೇಕು.



2. ಅಪೌಷ್ಟಿಕತೆ ಎತ್ತರ ಕಡಿಮೆಯಾಗಲು, ಇನ್ನೊಂದು ಕಾರಣವೆಂದರೆ ಪೋಷಕಾಂಶಯುಕ್ತ ಆಹಾರದ ಕೊರತೆ. ಮಗುವಿಗೆ ಮೊದಲಿನಿಂದಲೂ ಸಾಕಷ್ಟು ಪೋಷಕಾಂಶಗಳನ್ನು ಆಹಾರದಲ್ಲಿ ನೀಡದಿದ್ದರೆ, ಅದರ ಪರಿಣಾಮವು ಅವರ ಎತ್ತರ ಮತ್ತು ದೇಹದ ತೂಕದ ಮೇಲೆ ಕೆಲವು ವರ್ಷಗಳ ನಂತರ ಗೋಚರಿಸುತ್ತದೆ. ಕೆಲವೊಮ್ಮೆ ಸರಿಯಾದ ಪೋಷಣೆಯ ಕೊರತೆ ಅಥವಾ ಸಮತೋಲಿತ ಆಹಾರವು ಅಂಬೆಗಾಲಿಡುವ ಮಗುವಿನ ಚಟುವಟಿಕೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

3. ನರವೈಜ್ಞಾನಿಕ ಅಂಶಗಳು ಮಕ್ಕಳಲ್ಲಿ ಬೆಳವಣಿಗೆಯ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುವ ಕೆಲವು ರೀತಿಯ ನರವೈಜ್ಞಾನಿಕ ತೊಂದರೆಗಳಿದ್ದರೆ ಅವರ ಎತ್ತರದಲ್ಲಿ ಸಾಕಷ್ಟು ಬೆಳವಣಿಗೆ ಕಾಣಸಿಗುವುದಿಲ್ಲ. ಅಂತಹ ಸಮಸ್ಯೆಗಳು ದೀರ್ಘಾವಧಿಯವರೆಗೆ ಗೋಚರಿಸುವುದಿಲ್ಲ. ಆದರೆ ಇದ್ದಕ್ಕಿದ್ದಂತೆ ಗಮನಕ್ಕೆ ಬರುವುದು. ಮೆದುಳಿನ ಮೇಲಿನ ನರಗಳ ಸಮಸ್ಯೆಗಳು ಎತ್ತರದ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಮಗುವಿನ ಎತ್ತರದಲ್ಲಿ ಬೆಳವಣಿಗೆ ಕಾಣದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

4. ಹೈಪೋಥೈರಾಯ್ಡಿಸಮ್ ಮಗುವಿಗೆ ಥೈರಾಯ್ಡ್ ಇದ್ದರೆ, ಅದು ಮಗುವಿನ ಎತ್ತರದ ಮೇಲೆ ಪರಿಣಾಮ ಬೀರಬಹುದು. ಮಕ್ಕಳಲ್ಲಿ ಹೈಪೋಥೈರಾಯ್ಡಿಸಮ್ ಸಾಮಾನ್ಯವಲ್ಲದಿದ್ದರೂ, ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಹೈಪೋಥೈರಾಯ್ಡಿಸಮ್ ಮಗುವಿನ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗಬಹುದು. ಕೆಲವರಿಗೆ ಈ ಹೈಪೋಥೈರಾಯ್ಡಿಸಮ್ ಯಾವ ಸಮಸ್ಯೆ ಮಾಡದಿರಬಹುದು, ಇತರರಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ. ಆದ್ದರಿಂದ ಒಮ್ಮೆ ವೈದ್ಯರನ್ನು ಕಾಣುವುದು ಒಳ್ಳೆಯದು.
5. ಟರ್ನರ್ ಸಿಂಡ್ರೋಮ್ ಟರ್ನರ್ ಸಿಂಡ್ರೋಮ್ ಒಂದು ಆನುವಂಶಿಕ ಸ್ಥಿತಿಯಾಗಿದ್ದು ಅದು ವಿಶೇಷವಾಗಿ ಸ್ತ್ರೀಯರ ಮೇಲೆ ಪರಿಣಾಮ ಬೀರುವುದು. ಟರ್ನರ್ ಸಿಂಡ್ರೋಮ್ ಎನ್ನುವುದು X ಕ್ರೋಮೋಸೋಮ್ ಕಾಣೆಯಾಗಿರುವ ಸ್ಥಿತಿಯಾಗಿದ್ದು, ಇದು ಹುಡುಗಿಯರಲ್ಲಿ ಅವರ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. X ಕ್ರೋಮೋಸೋಮ್ ಇಲ್ಲದಿರುವುದರಿಂದ ಮಕ್ಕಳು ಕಡಿಮೆ ಎತ್ತರವನ್ನು ಹೊಂದಬಹುದು.

6.ಮೂಳೆಗಳ ಬೆಳವಣಿಗೆ ವಿಳಂಬ ಕೆಲವು ಮಕ್ಕಳಲ್ಲಿ ಮೂಳೆಗಳು ನಿಧಾನಗತಿಯಲ್ಲಿ ಪ್ರಬುದ್ಧವಾಗುವುದರಿಂದ ಎತ್ತರವು ವಿಳಂಬವಾಗಬಹುದು. ಅವರು ಇತರ ಮಕ್ಕಳಿಗಿಂತ ಸ್ವಲ್ಪ ಸಮಯದ ನಂತರ ಪ್ರೌಢಾವಸ್ಥೆಯನ್ನು ತಲುಪುತ್ತಾರೆ. ಇದು ಹದಿಹರೆಯದ ವರ್ಷಗಳಲ್ಲಿ ಸರಾಸರಿ ಎತ್ತರಕ್ಕಿಂತ ಕಡಿಮೆಗೆ ಕಾರಣವಾಗಬಹುದು. ಆದಾಗ್ಯೂ, ಹದಿಹರೆಯದ ಮತ್ತು ನಂತರದ ವರ್ಷಗಳಲ್ಲಿ ಈ ಸಮಸ್ಯೆ ಕಡಿಮೆಯಾಗುತ್ತದೆ. ಆದ್ದರಿಂದ, ಇದು ಶಾಶ್ವತ ಸಮಸ್ಯೆಯಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries