ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶೋತ್ಸವದ ಕಾರ್ಯಕ್ರಮವನ್ನು ಜೂನ್ 1 ರಂದು ಮಿಂಜ ಪಂಚಾಯತಿ ಸದಸ್ಯ ಬಾಬು ಕೂಳೂರು ಉದ್ಘಾಟಿಸಿದರು. .ಶಾಲಾ ಸಂಚಾಲಕ ಪಾವ್ಲ್ ಸಿಕ್ವೆರಾ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ್, ಮಾತೃ ಸಂಘದ ಅಧ್ಯಕ್ಷೆ ಗ್ರೆಟ್ಟಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ ಬೂಬ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ರಾವ್, ಅ|ಭಿವೃದ್ದಿ ಸಮಿತಿ ಅಧ್ಯಕ್ಷ ಸಿಲ್ವನ್ ಡಿಸೋಜ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ ಉಪಸ್ಥಿತÀರಿದ್ದರು.
ಪ್ರಿ ಪ್ರೈಮರಿ , 1ನೇ ತರಗತಿ ಮಕ್ಕಳನ್ನು, ಹೊಸತಾಗಿ ಸೇರಿದ ವಿದ್ಯಾರ್ಥಿಗಳಿಗೆ ಬೆಲೂನನ್ನು ನೀಡಿ ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತಿಸಲಾಯಿತು.