ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿಯ ಹುಟ್ಟು ಹಬ್ಬ ಪ್ರಯುಕ್ತ ಭಾವನಾತ್ಮಕ ಪತ್ರ ಬರೆದಿದ್ದು,ಅದರಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲಿ ಅವರು ಉಲ್ಲೇಖಿಸಿರುವ ಅಬ್ಬಾಸ್ ಹಾಗೂ ಈದ್ ನೆನಪು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಗೆ ಈಡಾಗಿದೆ.

ಅಬ್ಬಾಸ್ ಎಂಬವರು ತನ್ನ ತಂದೆಯ ಸ್ನೇಹಿತನ ಮಗನಾಗಿದ್ದು, ಆ ಸ್ನೇಹಿತ ಮೃತಪಟ್ಟ ಸಂದರ್ಭ ಆತ ತಮ್ಮ ಮನೆಯಲ್ಲಿಯೇ ವಾಸವಿದ್ದು ವಿದ್ಯಾಭ್ಯಾಸ ಪೂರೈಸಿದ್ದ ಎಂದು ಮೋದಿ ತಮ್ಮ ಬ್ಲಾಗ್ ನಲ್ಲಿ ಉಲ್ಲೇಖಿಸಿದ್ದರು.
ಇದಕ್ಕೆ ಸಂಬಂಧಿಸಿ #abbas ಹಾಗೂ #अब्बास ಹ್ಯಾಷ್‌ಟ್ಯಾಗ್‌ನೊಂದಿಗೆ ಹಲವಾರು ನೆಟ್ಟಿಗರು ಟ್ರೋಲ್ ಮಾಡಿದ್ದು, ಕೆಲವರು, ಅಕ್ಷಯ್ ಕುಮಾರ್ ಮುಂದಿನ ಸಿನೆಮಾದಲ್ಲಿ ʼಅಬ್ಬಾಸ್ʼ ಆಗಿ ನಟಿಸಲಿದ್ದಾರೆ ಎಂದು ವ್ಯಂಗ್ಯವಾಡಿದರೆ, ಇನ್ನೋರ್ವರು RRR ಚಿತ್ರ ಮೋದಿ ಮತ್ತು ಅವರ ಗೆಳೆಯ ಅಬ್ಬಾಸ್ ಕತೆಯನ್ನು ಆಧರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೋದಿಜಿ ಅವರು ಕೆಲಸ ಮಾಡಿದ ರೈಲ್ವೇ ನಿಲ್ದಾಣ, ಅವರ ಶಿಕ್ಷಕರು, ಸಹಪಾಠಿಗಳಂತೆ ಅಬ್ಬಾಸ್ ಕೂಡಾ ಯಾರೂ ಇದುವರೆಗೆ ನೋಡದಿರುವವರ ಪಟ್ಟಿಗೆ ಸೇರಿದ್ದಾರೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಸಾಂದರ್ಬಿಕ ಫೋಟೋಗಳನ್ನು ಹಂಚಿಕೊಂಡು, ಪ್ರಧಾನಿ ಮೋದಿ ಹಾಗೂ ಅವರ ಬಾಲ್ಯದ ಗೆಳೆಯ ಅಬ್ಬಾಸ್ ಅವರ ಅಪರೂಪದ ಚಿತ್ರ ಎಂದು ಬರೆದುಕೊಂಡಿದ್ದಾರೆ. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ.