ನವದೆಹಲಿ: ಕೋರ್ಸ್ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸಲು ಉದ್ಯಮ ಆಧಾರಿತ ಕೋರ್ಸ್‌ಗಳತ್ತ ಗಮನಹರಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಇತರೆ ಸಂಯೋಜಿತ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಉದ್ಯಮ ಆಧಾರಿತ ಕೋರ್ಸ್ ಮಾಡ್ಯೂಲ್‌ಗಳ ಅಭಿವೃದ್ಧಿ, ಪ್ರಚಾರಕ್ಕಾಗಿ ಪ್ರಮುಖ ಕೈಗಾರಿಕೆಗಳು ಮತ್ತು ಸಂಬಂಧಿತ ಸಂಘಗಳೊಂದಿಗೆ ಸಂವಹನ ನಡೆಸುವಂತೆ ತಾಂತ್ರಿಕ ಶಿಕ್ಷಣ ನಿಯಂತ್ರಕರು ಸೂಚಿಸಿದ್ದಾರೆ.
ಉದ್ಯಮ ಆಧಾರಿತ ಮತ್ತು ಕೌಶಲ್ಯ ಆಧಾರಿತ ಕೋರ್ಸ್ ಅಭಿವೃದ್ಧಿಪಡಿಸಲು, ಉತ್ತೇಜಿಸಲು ಹಾಗೂ ಉದ್ಯಮದಲ್ಲಿ ವಿದ್ಯಾರ್ಥಿಗಳ ಇಂಟರ್‌ನ್‌ಶಿಪ್ ಸುಗಮಗೊಳಿಸಲು ಎಐಸಿಟಿಇ ಪ್ರಮುಖ ಕೈಗಾರಿಕೆಗಳು ಮತ್ತು ಉದ್ಯಮ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ ಪ್ರಮುಖ ತಾಂತ್ರಿಕ ಕೌಶಲ, ಡಿಜಿಟಲ್ ಕೌಶಲ ಮತ್ತು ವೃತ್ತಿಪರ ಕೌಶಲ ಒದಗಿಸಲು ಕೈಗಾರಿಕೆಗಳು ಸಹಕಾರ ನೀಡಲು ಮುಂದೆ ಬಂದಿವೆ' ಎಂದು ಕಾಲೇಜುಗಳ ಪ್ರಾಂಶುಪಾಲರು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಮಂಡಳಿ ತಿಳಿಸಿದೆ.