ಮುಳ್ಳೇರಿಯ: ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ಮುಳಿಯಾರ್ ಪಂಚಾಯಿತಿಯ ಮುದಲಪ್ಪಾರೆಯಲ್ಲಿ ಇಪ್ಪತ್ತು ಎಕರೆ ಸ್ಥಳದಲ್ಲಿ ವರ್ಷಗಳ ಹಿಂದೆ ನಿರ್ಧರಿಸಿದ ಮಾದರಿ ಗ್ರಾಮ ನಿರ್ಮಾಣ ಸಾಧ್ಯವಾಗದಿರುವುದನ್ನು ಪ್ರತಿಭಟಿಸಿ ಎಂಡೋಸಲ್ಫಾನ್ ವಿರುದ್ಧ ಕಾರ್ಯಕರ್ತರು ಹಾಗೂ ತಾಯಂದಿರು ಪುನರ್ವಸತಿ ಶಿಲಾಫಲಕದಲ್ಲಿ ರೀತ್ ಸಲ್ಲಿಸಿ ಪ್ರತಿಭಟನೆ ನಡೆಸಿದರು.
ಖ್ಯಾತ ಮಾನವಹಕ್ಕು ಹೋರಾಟಗಾರ ಎನ್, ಸುಬ್ರಹ್ಮಣ್ಯನ್ ಧರಣಿ ಉದ್ಘಾಟಿಸಿ ಮಾತನಾಡಿ, ರೋಗಬಾಧಿತ ಮಕ್ಕಳನ್ನು ಸುರಕ್ಷಿತವಾಗಿ ವಾಸ್ತವ್ಯಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಾಗದ ಕಾರಣದಿಂದ ಎಂಡೋಸಂತ್ರಸ್ತ ಪುತ್ರಿಯನ್ನು ಕೊಂದು ತಾಯಿ ಆತ್ಮಹತ್ಯೆಗೈದಿರುವ ಘಟನೆ ಇನ್ನೂ ಹಸಿರಾಗಿದೆ. ಇಂತಹ ಘಟನೆ ಪುನರಾವರ್ತನೆಯಾಗದಿರಲು ಸರ್ಕಾರ ಪುನರ್ವಸತಿ ಗ್ರಾಮ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಪುನರ್ವಸತಿ ಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರ ಹೇಳಿಕೆಯನ್ನು ನೀಡುತ್ತಾ ಬರುತ್ತಿದ್ದು, ಕೇವಲ ಕಡತಗಳಿಗೆ ಸೀಮಿತವಾಗಿದೆ. ಕೇಂದ್ರದ ಕಾಂಗಾರಿ ಶೀಘ್ರ ಆರಂಭಿಸದಿದ್ದಲ್ಲಿ ಸಂತ್ರಸ್ತರು ಹಾಗೂ ನಾಗರಿಕರು ಒಟ್ಟುಸೇರಿ ಪ್ರಬಲ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಮುನಿಸಾ ಅಂಬಲತ್ತರ ಅಧ್ಯಕ್ಷತೆ ವಹಿಸಿದ್ದರು. ಎಂ. ಸುಲ್ಫತ್, ಕೆ.ಬಿ ಮಹಮ್ಮದ್‍ಕುಞÂ, ರೆಜಿ ಕರಿಂದಳಂ, ಸಉಬೈರ್ ಪಡ್ಪು, ಹಮೀದ್ ಚೇರಂಗೈ, ಆರ್ಷು ಪೊವ್ವಲ್, ಪ್ರೇಮಚಂದ್ರನ್ ಚೆಂಬಾಲ, ಶಿವಕುಮಾರ್ ಉಪಸ್ಥಿತರಿದ್ದರು. ಅಂಬಲತ್ತರ ಕುಞÂಕೃಷ್ಣನ್ ಸ್ವಾಗತಿಸಿದರು. ಕೆ. ಚಂದ್ರಾವತಿ ವಂದಿಸಿದರು.