ಮಧೂರು: ಶ್ರೀಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದಲ್ಲಿ ಪರಮಪೂಜ್ಯ ರಾಜರ್ಷಿ ಡಾ. ಡಿ ವೀರೇಂದ್ರ ಹೆಗ್ಗೆಡೆ ಹಾಗೂ ಮಾತಾಜಿಯವರ ಆಶೀರ್ವಾದದಿಂದ ಆರಂಭವಾದ ಭಜನಾ ಅಭಿಮಾನ - ಅಭಿಯಾನ ವಾರದ 18ನೇ ಕಾರ್ಯಕ್ರಮ ಸೂರ್ಲು ಶ್ರೀಗಣೇಶ ಭಜನಾ ಮಂದಿರದಲ್ಲಿ ಜರಗಿತು.
ಧಾರ್ಮಿಕ ಮುಂದಾಳು, ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆವಹಿಸಿದ್ದರು.ಪುರೋಹಿತ ರತ್ನ ನಾಗೇಂದ್ರ ಭಟ್ ಕೂಡ್ಲು ಧಾರ್ಮಿಕ ಉಪನ್ಯಾಸಗೈದರು.
ಭಜನಾ ಅಭಿಯಾನದ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ,ಶ್ರೀಗಣೇಶ ಭಜನಾ ಮಂದಿರದ ಅಧ್ಯಕ್ಷ ಸೀತಾರಾಂ, ವಸಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಮ ಟೈಲರ್ ಅವರನ್ನು ಸನ್ಮಾನಿಸಲಾಯಿತು. ಮೀರಾ ಹರೀಶ್ ಗಟ್ಟಿ ಉಳಿಯ ಸ್ವಾಗತಿಸಿ, ರೋಹಿತ್ ಮಧೂರು ವಂದಿಸಿದರು.ಪೇಟೆ ವೆಂಕಟ್ರಮಣ ಮಹಿಳಾ ಭಜನಾ ತಂಡ ಹಾಗೂ ಶ್ರೀಶಕ್ತಿ ಬಾಲವೃಂದ ಉಳಿಯತ್ತಡ್ಕ, ಮುತ್ತಪ್ಪ ಮಹಿಳಾ ಭಕ್ತ ವೃಂದ ಪಾರೆಕಟ್ಟೆ ಇವರು ಭಜನಾ ಸೇವೆ ನಡೆಸಿದರು.