ಕಾಸರಗೋಡು: ಗ್ರಂಥಾಲಯ ಸಂಘದ ಸಂಸ್ಥಾಪಕ ಪಿ.ಎನ್.ಪಣಿಕ್ಕರ್ ಅವರ ಸ್ಮರಣಾರ್ಥ ಜೂ.19ರಂದು(ನಾಳೆ) ಜಿಲ್ಲೆಯಲ್ಲಿ ವಾಚನ ದಿನಾಚರಣೆಯನ್ನು ವ್ಯಾಪಕವಾಗಿ ಆಚರಿಸಲಾಗುವುದು. ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯು ಜೂ.19ರಂದು ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿರುವ ವಾಚನ ದಿನಾಚರಣೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ವಿ.ಎಂ. ಮುನೀರ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸಂದೇಶ ನೀಡಲಿದ್ದಾರೆ. ಮಾಜಿ ಶಾಸಕ ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ ಅಧ್ಯಕ್ಷ ಕೆ.ವಿ.ಕುಂಞÂ್ಞ ರಾಮನ್ ಆಶಯ ಭಾಷಣ ಮಾಡಲಿದ್ದಾರೆ. ಪಿ.ಎನ್.ಪಣಿಕ್ಕರ್ ಫೌಂಡೇಶನ್ ಜಿಲ್ಲಾಧ್ಯಕ್ಷ ಪ್ರೊ. ಕೆಪಿ ಜಯರಾಜನ್ ಪಿಎನ್ ಪಣಿಕರ್ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ವ್ಯಂಗ್ಯಚಿತ್ರಕಾರ ಕೆ.ಎ.ಗಫೂರ್ ಸಾಂಸ್ಕøತಿಕ ಉಪನ್ಯಾಸ ನೀಡಲಿದ್ದಾರೆ. ವಾರ್ಡ್ ಕೌನ್ಸಿಲರ್ ರಂಜಿತಾ, ಎಡಿಎಂ ಎ.ಕೆ.ರಾಮೇಂದ್ರನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ನೆಹರು ಯುವಕೇಂದ್ರ ಪ್ರತಿನಿಧಿ ಅನ್ನಮ್ಮ, ಶಾಲಾ ಮುಖ್ಯೋಪಾಧ್ಯಾಯ ಡೊಮಿನಿಕ್ ಆಗಸ್ಟಿನ್, ಮುಖ್ಯಶಿಕ್ಷಕ ಎಂ.ಸಿದ್ದಿಕ್, ಒಕ್ಕೂಟದ ಉಪಾಧ್ಯಕ್ಷ ಎಂ.ಸಿದ್ಧಿಕ್ ಮತ್ತಿತರರಿರುವರು.
ಜೂನ್ 20 ರಂದು ಜಿಲ್ಲಾ ಸಾಕ್ಷರತಾ ಮಿಷನ್ ವತಿಯಿಂದ ಜಿಲ್ಲಾ ಪಂಚಾಯ್ತಿಯ ಇ.ಕೆ.ನಾಯನಾರ್ ಸ್ಮಾರಕ ಗ್ರಂಥಾಲಯದ ಕಾರ್ಯನಿರ್ವಹಣೆಯನ್ನು ಹಸ್ತಾಂತರಿಸಲಾಗುವುದು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಗ್ರಂಥಾಲಯದ ನವೀಕರಣ ಉದ್ಘಾಟಿಸುವರು. ಪರಪ್ಪ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಜಿಲ್ಲಾ ಗ್ರಂಥಾಲಯಗಳು, ವಿವಿಧ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯ ಕ್ಯಾಂಪಸ್, ಶಿಕ್ಷಕರ ತರಬೇತಿ ಕೇಂದ್ರಗಳು ಮತ್ತು ಕಲೆಕ್ಟರೇಟ್ ಸಾಕ್ಷರತಾ ಗ್ರಂಥಾಲಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೂ.25ರಂದು ಜಿಲ್ಲಾ ಮಾಹಿತಿ ಕಚೇರಿ ನೇತೃತ್ವದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಮಲಯಾಳಂ ವಿಭಾಗದಲ್ಲಿ ಸಾಹಿತ್ಯ ರಸಪ್ರಶ್ನೆ ಆಯೋಜಿಸಲಾಗಿದೆ. ಕುಟುಂಬಶ್ರೀ ನೇತೃತ್ವದಲ್ಲಿ ಭಾಷಾ ಅಲ್ಪಸಂಖ್ಯಾತರ ಪ್ರದೇಶದಲ್ಲಿ ವಾಚನಗೋಷ್ಠಿ ನಡೆಯಲಿದೆ. ಪುಸ್ತಕ ಚರ್ಚೆ, ಸಣ್ಣಕಥೆ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ವಾಚನ ಸ್ಪರ್ಧೆ, ಕವನ ಸ್ಪರ್ಧೆ, ಖ್ಯಾತ ಸಾಹಿತಿಗಳ ಸಂಸ್ಮರಣ ದಿನಾಚರಣೆ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು.