ಕಾಸರಗೋಡು: ಕಾವುಗೋಳಿ ಸರಕಾರಿ ಎಲ್‍ಪಿ ಶಾಲೆಯಲ್ಲಿ ವಾಚನ ಸಪ್ತಾಹಕ್ಕೆ ಚಾಲನೆಯಾಯಿತು. ಪಂಚಾಯಿತಿ ಸದಸ್ಯ ಹಾಗೂ ವೆಲ್ಫೇರ್ ಸಮಿತಿ ಅಧ್ಯಕ್ಷ ನಿಸಾರ್ ಔಪಚಾರಿಕವಾಗಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಅಬ್ದುಲ್ಲ ಎರಿಯಾಲ್ ಶಾಲಾಮಟ್ಟದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ, ನಮ್ಮ ಜೀವನದಲ್ಲಿ ಓದುವಿಕೆಗೆ ಮಹತ್ವ ನೀಡಬೇಕು ಎಂದರು. ಮಕ್ಕಳಿಗೆ ನೀಡಬೇಕಾದ ಹಲವಾರು ಅನುಭವಗಳಲ್ಲಿ ಓದು ಕೂಡಾ ಒಂದು. ಓದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಮಕ್ಕಳಿಗೆ ಪ್ರಚೋದನೆ ನೀಡಿದರು. ಅಧ್ಯಾಪಕ ಮೊಯ್ದೀನ್ ಕುಞÂ ಶುಭಾಶಂಸನೆಗೈದರು. ಅಧ್ಯಾಪಕರಾದ ಶ್ರೀಜ, ಅಮಿತಾ, ಮೂಸೀನ, ಧನ್ಯಾ ಓದುವಿಕೆಗೆ ಸಂಬಂಧಿಸಿ ಕಥೆ, ಕವಿತೆ ಹಾಗೂ ಪಿ. ಎನ್. ಪಣಿಕ್ಕರ್ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಶಿಖ ಮತ್ತು ಆಯಿಷಾ ಪಿ. ಎನ್. ಪಣಿಕ್ಕರ್ ಕುರಿತು ಭಾಷಣಗೈದರು. ಅಧ್ಯಾಪಕ ಅಮೃತ್‍ಲಾಲ್ ಸ್ವಾಗತಿಸಿ, ವಿನೀತಾ ಡಿಸೋಜ ವಂದಿಸಿದರು. ಒಂದು ವಾರಗಳ ಕಾಲ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ.