HEALTH TIPS

ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಗಳ ಬಳಕೆ ಕಡಿಮೆ ಮಾಡಿ: ಕೇಂದ್ರ ಕೃಷಿ ಸಚಿವ ತೋಮರ್

 ನವದೆಹಲಿ: ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಲು ಖಾಸಗಿ ವಲಯವೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಸೋಲನ್‌ನಿಂದ (ಹಿಮಾಚಲ ಪ್ರದೇಶ) ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ವರ್ಚುವಲ್ ಆಯೋಜಿಸಿದ್ದ 11 ನೇ ಅಗ್ರೋಕೆಮಿಕಲ್ಸ್ ಕಾನ್‌ಕ್ಲೇವ್ ಅನ್ನು ಉದ್ದೇಶಿಸಿ ತೋಮರ್ ಮಾತನಾಡಿದರು.

ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಕೊಡುಗೆ ಅಪಾರವಾಗಿದೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಲಾಭ ಬಹಳ ಮುಖ್ಯ. ಉತ್ಪಾದನೆಯ ಹೆಚ್ಚಳವೂ ಬಹಳ ಅವಶ್ಯಕ. ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ವಿಷಯದಲ್ಲಿ ದೇಶದಲ್ಲಿ ಉತ್ತಮ ಕೆಲಸ ನಡೆಯುತ್ತಿದೆ. ಕೃಷಿ ಕ್ಷೇತ್ರದಲ್ಲೂ ಲಾಭ ಹೆಚ್ಚಿಸುವುದು ಅಗತ್ಯವಾಗಿದ್ದು, ಕಟಾವಿನ ನಂತರ ರೈತರಿಗೆ ಆಗುವ ನಷ್ಟ ಕಡಿಮೆ ಆಗಬೇಕು. ಅದಕ್ಕಾಗಿ ಕ್ರಮಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ.

ರೈತರು ದುಬಾರಿ ಬೆಳೆಗಳಿಗೆ ಹೋಗಲು ತಂತ್ರಜ್ಞಾನ ಬಳಸಬೇಕೆಂಬುದು ಸರಕಾರದ ಗುರಿ. ಬೆಳೆಗಳ ಉತ್ಪಾದನೆಯಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವುಗಳ ಉತ್ಪಾದನೆಯಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಲಾಗುತ್ತಿದೆ ಎಂದರು.

ಇಂದು ತೋಟಗಾರಿಕೆಯೂ ಹೆಚ್ಚಾಗಬೇಕು. ಇದರಿಂದ ನಾವು ಎಲ್ಲ ರೀತಿಯಲ್ಲೂ ಸ್ವಾವಲಂಬಿಗಳಾಗಬೇಕು ಎಂದು ಕೃಷಿ ಸಚಿವರು ಹೇಳಿದರು. ಆಹಾರ ಧಾನ್ಯಗಳ ದೃಷ್ಟಿಯಿಂದ ನಮ್ಮ ದೇಶ ಬಹಳ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು, ನಾವು ಇತರ ಕೃಷಿ ಅಭಿವೃದ್ಧಿ ಹೊಂದಿದ ದೇಶಗಳತ್ತ ನೋಡಬೇಕು. 10 ಸಾವಿರ ಹೊಸ ಎಫ್‌ಪಿಒಗಳನ್ನು ಸಹ ರಚಿಸಲಾಗುತ್ತಿದ್ದು, ಇದರಿಂದ ರೈತರಿಗೆ ಸಾಕಷ್ಟು ಲಾಭವಾಗುತ್ತಿದೆ. ಬೆಳೆ ವೈವಿಧ್ಯೀಕರಣವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಸಹಕಾರಿಯಾಗಿವೆ ಎಂದರು.

ಕೃಷಿ ಅಭಿವೃದ್ಧಿಗಾಗಿ ಈIಅಅI ಯಂತಹ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಕೇಂದ್ರ ಕೃಷಿ ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries