ಬದಿಯಡ್ಕ: ಕವಿ, ಪತ್ರಕರ್ತ ಪ್ರಚೋದಯ ದತ್ತಿನಿಧಿ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಅಭಿಮಾನಿ ಬಳಗ ಬದಿಯಡ್ಕ ಇವರ ನೇತೃತ್ವದಲ್ಲಿ ಇಂದು(ಜೂ.5) ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಕವಿ ಕಾವ್ಯ ಸಂವಾದ, ಕಾವ್ಯ ಗಾಯನ ಹಾಗೂ ಅಭಿನಂದನಾ ಸಮಾರಂಭ ಬೆಳಿಗ್ಗೆ 10 ರಿಂದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ಕವಿ ಕಾವ್ಯ ಸಂವಾದ ನಡೆಯಲಿದ್ದು, ಕವಯಿತ್ರಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅ|ಧ್ಯಕ್ಷತೆ ವಹಿಸುವರು. ವಿರಾಜ ಅಡ|ಊರು, ದಯಾನಂದ ರೈ ಕಳ್ವಾಜೆ, ಪದ್ಮಾವತಿ ಏದಾರ್, ಚಂದ್ರಕಲಾ ನೀರಾಳ, ಅಪೂರ್ವ ಕಾರಂತ ಪುತ್ತೂರು, ನವೀನ್ ಕುಲಾಲ್ ಚಿಪ್ಪಾರ್ ಕವಿತೆಗಳನ್ನು ವಾಚಿಸುವರು. ಕಾರ್ತಿಕ್ ಪಡ್ರೆ ಸಮನ್ವಯಕಾರರಾಗಿ ಸಹಕರಿಸುವರು. 11 ರಿಂದ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಕಾವ್ಯ ಗಾಯನ ನಡೆಯಲಿದೆ. 12 ರಿಂದ ಅ|ಭಿನಂದನಾ ಸಮಾರಂಭ ನಡೆಯಲಿದ್ದು, ಖ್ಯಾತ ವೈದ್ಯ, ಸಾಹಿತಿ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಅಧ್ಯಕ್ಷತೆ ವಹಿಸುವರು. ಕವಯಿತ್ರಿ ವಸಂತಲಕ್ಷ್ಮೀ ಪುತ್ತೂರು ಮುಖ್ಯ ಅತಿಥಿಗಳಾಗಿರುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕಾಸರಗೋಡಿನ ಕನ್ನಡ |ಭವನ ಗ್ರಂಥಾಲಯದ ಸ್ಥಾಪಕಾಧ್ಯಕ್ಷ ವಾಮನ ರಾವ್ ಬೇಕಲ್, ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷ ನಾರಾಯಣ ಬಾರಡ್ಕ ಶುಭಾಶಂಸನೆಗೈಯ್ಯಲಿರುವರು.