ಬದಿಯಡ್ಕ : ಚಿನ್ನಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಯನ್ನು ನೀಡಬೇಕೆಂದು ಆಗ್ರಹಿಸಿ ಬಿಜೆಪಿ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ಬುಧವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮುಖ್ಯಮಂತ್ರಿಯವರ ಪ್ರತಿಕೃತಿಗೆ ಬೆಂಕಿಯನ್ನು ಹಚ್ಚಿದ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಘೋಷಣೆಗಳನ್ನು ಕೂಗಿದರು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಮಾತನಾಡಿ ಕೇರಳದ ಜನರನ್ನು ವಂಚಿಸುತ್ತಾ ರಾಜ್ಯವನ್ನಾಳುತ್ತಿರುವ ಮುಖ್ಯಮಂತ್ರಿ ಕೂಡಲೇ ರಾಜೀನಾಮೆಯನ್ನು ನೀಡಬೇಕು ಎಂದರು. ಪಕ್ಷದ ಮುಖಂಡರಾದ ಸುನಿಲ್ ಪಿ.ಆರ್., ಅವಿನಾಶ್ ರೈ, ಗೋಪಾಲಕೃಷ್ಣ ಮುಂಡೋಳುಮೂಲೆ, ರಕ್ಷಿತ್ ಕೆದಿಲಾಯ, ಎಂ. ನಾರಾಯಣ ಭಟ್, ಈಶ್ವರ ಮಾಸ್ತರ್ ಪೆರಡಾಲ, ಬಾಲಕೃಷ್ಣ ಶೆಟ್ಟಿ ಕಡಾರು, ವಕೀಲ ಗಣೇಶ್, ಪ್ರಮೋದ್ ಭಂಡಾರಿ, ಸುರೇಶ್ ಬಿ.ಕೆ., ರಮೇಶ್ ಕೆಡೆಂಜಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.