ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಪಟ್ಟಾಜೆ 14 ನೇ ವಾರ್ಡು ಉಪ ಚುನಾವಣೆ ಜುಲೈ 17 ರಂದು ಘೋಷಣೆಯಾಗಿದ್ದು, ಬಿಜೆಪಿ ಬದಿಯಡ್ಕ ಮಂಡಲ ಕೋಶಾಧಿಕಾರಿ ಮಹೇಶ ವಳಕುಂಜ ಅವರು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಚುಕ್ಕಿನಡ್ಕದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರು ಅಭ್ಯರ್ಥಿಯ ಹೆಸರು ಘೋಷಿಸಿದರು. ಸಮಾವೇಶವನ್ನು ರವೀಶ ತಂತ್ರಿ ಕುಂಟಾರು ಉದ್ಘಾಟಿಸಿದರು. ಚುನಾವಣಾ ಸಮಿತಿ ಅಧ್ಯಕ್ಷ ವೆಂಕಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್, ಇತರರಾದ ಸೌಮ್ಯ ಮಹೇಶ್, ಶ್ರಿಧರ ಬೆಳ್ಳೂರು, ಹರೀಶ್ ನಾರಂಪಾಡಿ, ಈಶ್ವರ ನಾಯ್ಕ ಪೆರಡಾಲ, ಪಿ.ಆರ್.ಸುನಿಲ್ ಮೊದಲಾದವರು ಮಾತನಾಡಿದರು. ಅಶ್ವಿನಿ ಮೊಳೆಯಾರು ಸ್ವಾಗತಿಸಿ ವಿಜಯ ಸಾಯಿ ವಂದಿಸಿದರು. ಬಿಜೆಪಿಯ ಶಕ್ತಿ ಕೇಂದ್ರವಾದ ಪಟ್ಟಾಜೆ ವಾರ್ಡಿನಲ್ಲಿ ಸದಸ್ಯರಾಗಿದ್ದ ಕೆ.ಎನ್.ಕೃಷ್ಣ ಭಟ್ ರಾಜೀನಾಮೆ ನೀಡಿದ್ದು ಇದರಿಂದಾಗಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.