ನವದೆಹಲಿ: 'ಬ್ರಿಕ್ಸ್' ಸದಸ್ಯ ರಾಷ್ಟ್ರಗಳ ಪರಸ್ಪರ ಸಹಕಾರವು ಕೋವಿಡ್ ನಂತರ ಜಾಗತಿಕ ಆರ್ಥಿಕ ಚೇತರಿಕೆಗೆ ಉಪಯುಕ್ತ ಕೊಡುಗೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ನವದೆಹಲಿ: 'ಬ್ರಿಕ್ಸ್' ಸದಸ್ಯ ರಾಷ್ಟ್ರಗಳ ಪರಸ್ಪರ ಸಹಕಾರವು ಕೋವಿಡ್ ನಂತರ ಜಾಗತಿಕ ಆರ್ಥಿಕ ಚೇತರಿಕೆಗೆ ಉಪಯುಕ್ತ ಕೊಡುಗೆ ನೀಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಚೀನಾ ಅಧ್ಯಕ್ಷ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ನಾಯಕರ ಸಮ್ಮುಖದಲ್ಲಿ ವರ್ಚುವಲ್ ಆಗಿ ನಡೆದ ಬ್ರಿಕ್ಸ್‌ನ ವಾರ್ಷಿಕ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಈ ವಿಷಯ ತಿಳಿಸಿದರು.
ವಿಶ್ವದ ಐದು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಸಂಘಟನೆಯೇ 'ಬ್ರಿಕ್ಸ್'. ಈ ದೇಶಗಳು ಜಾಗತಿಕ ಜನಸಂಖ್ಯೆಯ ಶೇ 41ರಷ್ಟು, ಜಾಗತಿಕ ಜಿಡಿಪಿಯ ಶೇ 24ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ 16ರಷ್ಟು ಪಾಲನ್ನು ಹೊಂದಿವೆ.
ಕೆಲವು ವರ್ಷಗಳಲ್ಲಿ ಬ್ರಿಕ್ಸ್‌ನಲ್ಲಿ ಕೈಗೊಂಡ ರಚನಾತ್ಮಕ ಬದಲಾವಣೆಗಳು ಗುಂಪಿನ ಪ್ರಭಾವವನ್ನು ಹೆಚ್ಚಿಸಿವೆ. 'ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್' (ಎನ್‌ಡಿಬಿ) ಸದಸ್ಯತ್ವವು ಹೆಚ್ಚಿರುವುದು ಸಂತೋಷದ ವಿಷಯ. ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವು ಅವರ ನಾಗರಿಕರಿಗೆ ಪ್ರಯೋಜನವನ್ನೂ ತಂದಿದೆ ಎಂದು ಮೋದಿ ಹೇಳಿದರು.
ಶೃಂಗದಲ್ಲಿ ನಡೆಯುವ ಚರ್ಚೆಗಳು ಸದಸ್ಯ ದೇಶಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂಬ ವಿಶ್ವಾಸವಿದೆ ಎಂದರು.