ಬದಿಯಡ್ಕ: ವಯೋಜನರಿಗೆ ಅಗತ್ಯವುಳ್ಳ ಎಲ್ಲಾ ಸೌಲಭ್ಯಗಳನ್ನು ನೀಡುವಲ್ಲಿ ಗ್ರಾಮಪಂಚಾಯಿತಿ ಮುತುವರ್ಜಿಯನ್ನು ವಹಿಸುತ್ತಿದೆ. ಇಲ್ಲಿ ನಡೆಯುತ್ತಿರುವ ಜನೋಪಯೋಗಿ ಚಟುವಟಿಕೆಗಳು ಇನ್ನಷ್ಟು ನಡೆಯಲಿ. ಹಿರಿಯರ ಆರೋಗ್ಯದ ಕುರಿತು ಕಾಳಜಿಯನ್ನು ವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಾರಡ್ಕ ಹೇಳಿದರು.
ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘ ಕಾಸರಗೋಡು ಇವರ ವತಿಯಿಂದ ಬದಿಯಡ್ಕ ಹಗಲು ಮನೆಯಲ್ಲಿ ಜರಗಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪ್ರಸಿದ್ಧ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ವೃದ್ಧಾಪ್ಯದಲ್ಲೂ ಆರೋಗ್ಯದಿಂದಿರಲು ಅಗತ್ಯವುಳ್ಳ ಆಹಾರ ಕ್ರಮಕ್ಕೆ ನಾವು ಹೊಂದಿಕೊಳ್ಳಬೇಕು. ಹಿತಿಮಿತವಾದ ಆಹಾರವನ್ನು ಸೇವಿಸುತ್ತಾ ನಿಯಮಿತವಾಗಿ ವೈದ್ಯರ ಸಲಹೆನ್ನೂ ಪಡೆದುಕೊಳ್ಳಬೇಕು ಎಂದರು. ಹಿರಿಯರಾದ ಪಿಲಿಂಗಲ್ಲು ಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಾರ್ಡು ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದ ಉಪಾಧ್ಯಕ್ಷ ಅಚ್ಚುತ ಭಟ್ ಪೊಟ್ಟಿಪ್ಪಲ ಉಪಸ್ಥಿತರಿದ್ದರು. ನೆಲ್ಲಿಕಟ್ಟೆ ಚೂರಿಪ್ಪಳ್ಳದಲ್ಲಿರುವ `ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ' ಇವರು ಶಿಬಿರವನ್ನು ನಡೆಸಿಕೊಟ್ಟರು. ಚಿಕಿತ್ಸಾಲಯದ ಡಾ. ವಾಣಿಶ್ರೀ ಅವರು ಮಾತನಾಡಿ ಆಯುರ್ವೇದವು ಮನುಕುಲದ ಪುರಾತನ ವೈದ್ಯ ಪದ್ಧತಿಯಾಗಿದೆ. ಇದು ಎಲ್ಲಾ ಕಾಲಕ್ಕೂ ಭರವಸೆಯ ಔಷಧಿÀ ಎಂದು ಹೇಳಿದರು. ಕೋಶಾಧಿಕಾರಿ ಡಾ. ವೆಂಕಟ ಗಿರೀಶ್ ಪೊಟ್ಟಿಪ್ಪಲ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಈಶ್ವರ ಭಟ್ ಪೆರ್ಮುಖ ಶುಭಕೋರಿದರು. ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಶಂಕರನಾರಾಯಣ ಭಟ್ ಸಂಪತ್ತಿಲ್ಲ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಗುರುರಾಜ್ ಎಂ.ಆರ್. ವಂದಿಸಿದರು. ಪ್ರಣಮ್ಯಾ ದೇವಿ ಪ್ರಾರ್ಥನೆಯನ್ನು ಹಾಡಿದರು.