ನವದೆಹಲಿ: ಜೂನ್ 30ರೊಳಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. ಕೇಂದ್ರ ನಗರ ವ್ಯವಹಾರಗಳ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಪ್ರಸ್ತಾಪವು ರಾಷ್ಟ್ರವ್ಯಾಪಿ 'ಸ್ವಚ್ಛ ಮತ್ತು ಹಸಿರು' ಅಭಿಯಾನದ ಭಾಗವಾಗಿದೆ.
ಪರಿಸರ ದಿನಾಚರಣೆಯ ಪ್ರಯುಕ್ತ ಸ್ವಚ್ಛ ಮತ್ತು ಹಸಿರು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚು ಪ್ಲಾಸ್ಟಿಕ್ ಎಸೆಯುವ ಹಾಟ್‍ಸ್ಪಾಟ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅಭಿಯಾನವು ಒತ್ತಾಯಿಸುತ್ತದೆ. ಮಿಂಚಿನ ತಪಾಸಣೆ, ದಂಡ ವಿಧಿಸುವಂಥ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ಲಾಸ್ಟಿಕ್ ನಿಷೇಧವನ್ನು ಬಿಗಿಗೊಳಿಸಬೇಕು ಎಂದು ಕೇಂದ್ರ ಸೂಚಿಸಿದೆ.
ಇಲ್ಲಿಯವರೆಗೆ, ದೇಶಾದ್ಯಂತ 4,704 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದೇ ಬಾರಿ ಪ್ಲಾಸ್ಟಿಕ್ ನಿಷೇಧವನ್ನು ಹೊರಡಿಸಲಾಗಿದೆ. ಇನ್ನುಳಿದ 2,100 ಸ್ಥಳೀಯ ಸಂಸ್ಥೆಗಳಲ್ಲಿ ಆದೇಶ ಜಾರಿಯಾಗಬೇಕಿದೆ. ಇನ್ನೂ ಜಾರಿಯಾಗದ ಸ್ಥಳೀಯ ಸಂಸ್ಥೆಗಳನ್ನು ಗುರುತಿಸಿ ಜಾರಿಗೊಳಿಸುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕೆಂದು ಕೇಂದ್ರವು ಬಯಸುತ್ತದೆ.