ಚೆನ್ನೈ: ಕೇಂದ್ರ ಸರ್ಕಾರ ಶೀಘ್ರವೇ ಒಂದು ದೇಶ, ಒಂದು ಡಯಾಲಿಸಿಸ್ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.
ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆಯಡಿಯಲ್ಲಿ ಒನ್ ನೇಷನ್, ಒನ್ ಡಯಾಲಿಸಿಸ್ ಯೋಜನೆ ಜಾರಿಗೆ ಬರಲಿದ್ದು, ಈ ಕಾರ್ಯಕ್ರಮದ ಅಡಿಯಲ್ಲಿ ಯಾವುದೇ ರೋಗಿ ದೇಶದ ಯಾವುದೇ ಭಾಗದಲ್ಲಿ ಡಯಾಲಿಸಿಸ್ ಮಾಡಿಸಬಹುದಾಗಿದೆ.
ಕೇಂದ್ರ ಆರೋಗ್ಯ ಸಚಿವರು ತಮಿಳುನಾಡು, ಪುದುಚೆರಿ ಪ್ರವಾಸದಲ್ಲಿದ್ದು, ಚೆನ್ನೈ ನಲ್ಲಿನ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೊಬೋಟಿಕ್ ಸರ್ಜರಿ ಯಂತ್ರವನ್ನು ವೀಕ್ಷಿಸಿ ಮಾಹಿತಿ ಪಡೆದರು. ಇದೇ ವೇಳೆ ಅವದಿಯಲ್ಲಿ ಸಿಜಿಹೆಚ್ಎಸ್ ವೆಲ್ನೆಸ್ ಕೇಂದ್ರ ಹಾಗೂ ಪ್ರಯೋಗಾಲಯಕ್ಕೆ ಮನ್ಸುಖ್ ಮಾಂಡವೀಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ.