ಮಂಜೇಶ್ವರ: ಪಾವೂರು ಪೆÇಯೈ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆಡಳಿತ ಮಂಡಳಿ ಬಜಾಲ್ ಪಾವೂರು ಇದರ ವಾರ್ಷಿಕ ಮಹಾಸಭೆ ಕ್ಷೇತ್ರದ ವಠಾರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಪೂಜಾರಿ ನೆಕ್ಕಲ ವಹಿಸಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭುಜಂಗ ಸಿಂತಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ವರದಿ ಸಲ್ಲಿಸಿದರು. ಲೆಕ್ಕಪತ್ರ ಮಂಡನೆ ನಡೆಯಿತು. ಕ್ಷೇತ್ರಾಡಳಿತ ಮಂಡಳಿಯ ನೂತನ ಸಮಿತಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಮುಗೇರ್ ಗುತ್ತು ಶಿವರಾಮ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಸಂತ ರೆಂಜೆಪಡುಪು ಮತ್ತು ಚಂದ್ರಹಾಸ ಪೂಜಾರಿ ಮುಡಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರವಿ ಮುಡಿಮಾರ್, ಜೊತೆ ಕಾರ್ಯದರ್ಶಿಯಾಗಿ ಬೋಜ ಮಾಸ್ತರ್ ಬಳ್ಳೂರು, ಮತ್ತು ನಾರಾಯಣ ಶೆಟ್ಟಿ ಬಜಾಲ್, ಕೋಶಾಧಿಕಾರಿಯಾಗಿ ಭುಜಂಗ ಸಿಂತಾಜೆ, ಲೆಕ್ಕ ಪರಿಶೋಧಕರಾಗಿ ಬಿ.ತ್ಯಾಂಪಣ್ಣ ರೈ ಪಾವೂರು, ಮತ್ತು ವಿನೋದ್ ಕುಮಾರ್ ರೆಂಜೆಪಡಪು ಆಯ್ಕೆಯಾದರು. 21 ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಟಿ.ನಾರಾಯಣ ಶೆಟ್ಟಿ ತೋಟ ಪಾವೂರು, ಸುಧಾಕರ ಶೆಟ್ಟಿ ಪಾವೂರು, ಮೊನಪ್ಪ ಶೆಟ್ಟಿ ಮುಟ್ವ, ನಾಗೇಶ್ ಬಳ್ಳೂರು, ರಾಜಕುಮಾರ್ ಮುಟ್ಟ, ಸದಾಶಿವ ಬಂಜನ್ ಪಾದೆ, ಮಾಧವ ಪೂಜಾರಿ ಕುದುಕೋರಿ, ಶಾಂಭ ನಾಯ್ಗ ಕೆದುಂಬಾಡಿ, ಜಯಪ್ರಕಾಶ್ ಅಡ್ಯಂತಾಯ ಕಾಪು, ಪುಷ್ಪ ರಾಜ್ ಪಾವೂರು ಗುತ್ತು,ಶೇಖರ್ ಕಾನದಕಟ್ಟ, ಉದಯಕುಮಾರ್ ಬೊಳಕಡ, ನಾಗೇಶ್ ಮುಚ್ಚಿಲ್ಲಮೆ, ರಾಜೇಶ್ ಕಾನದಕಟ್ಟ, ಬೂಬ ಡಿ.ಪೆÇಯೈ,ನವೀರಾಜ್ ಮುಡಿಮಾರ್, ಜಗನ್ನಾಥ ನೆಕ್ಕಲ, ಗೋಪಾಲ ನೆಕ್ಕಲ, ದಯಾನಂದ ನೆಕ್ಕಲ, ಮೋಹನ್ ದಾಸ್ ಪುಳಿತ್ತಡಿ, ಉಮೇಶ ಕೊಪ್ಪಳ ಇವರನ್ನು ಕಾರ್ಯಕಾರಿ ಸಮಿತಿಗೆ ಆರಿಸಲಾಯಿತು. ಭುಜಂಗ ಸಿಂತಾಜೆ ಸ್ವಾಗತಿಸಿ, ರವಿ ಮುಡಿಮಾರ್ ವಂದಿಸಿದರು.