ಭೋಪಾಲ್: ಭೂಗತ ದೊರೆ ದಾವೂದ್ ಇಬ್ರಾಹಿಂನ ತಮ್ಮ ಇಕ್ಬಾಲ್ ಕಸ್ಕರ್‌ನ ಸಹಚರನಿಂದ ತಮಗೆ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಶನಿವಾರ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭೋಪಾಲ್: ಭೂಗತ ದೊರೆ ದಾವೂದ್ ಇಬ್ರಾಹಿಂನ ತಮ್ಮ ಇಕ್ಬಾಲ್ ಕಸ್ಕರ್‌ನ ಸಹಚರನಿಂದ ತಮಗೆ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಭೋಪಾಲ್‌ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ಶನಿವಾರ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
'ಪ್ರಗ್ಯಾ ಅವರಿಗೆ ಕರೆ ಮಾಡಿದ ಕಸ್ಕರ್‌ನ ಸಹಚರ ಎನ್ನಲಾದ ವ್ಯಕ್ತಿ, ನೀವು ಮುಸ್ಲಿಮರ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ವಿಷಬೀಜ ಹರಡುತ್ತಿದ್ದೀರಿ' ಎಂದು ಹೇಳಿದ್ದಾನೆ ಎಂದು ಟಿ.ಟಿ ನಗರ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಚೆನ್ ಸಿಂಗ್ ರಘುವಂಶಿ ತಿಳಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿರುವ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ 506 (ಅಪರಾಧ ಬೆದರಿಕೆ) ಹಾಗೂ 507ಗಳ (ಅನಾಮಧೇಯ ಸವಹನದಿಂದ ಅಪರಾಧ ಬೆದರಿಕೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.