HEALTH TIPS

ಮನೆ ಬಾಗಿಲಿಗೆ ಆಧಾರ್ ಸೇವೆ; ಅಂಚೆ ಮೂಲಕ ಹೊಸ ಯೋಜನೆ ಜಾರಿ..

 ನವದೆಹಲಿ: ನಿಮ್ಮ ಮನೆ ಬಾಗಿಲಿಗೆ ಸ್ಪೀಡ್​ಪೋಸ್ಟ್ ಗಳನ್ನು ತಲುಪಿಸುತ್ತಿರುವ ಅಂಚೆಯಣ್ಣ ಇನ್ಮುಂದೆ ಆಧಾರ್ ಸೇವೆಯನ್ನೂ ಒದಗಿಸಲಿದ್ದಾರೆ. ಈ ಸಂಬಂಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ), ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್​ನ 48 ಸಾವಿರ ಪೋಸ್ಟ್​ಮ್ಯಾನ್​ಗಳಿಗೆ ದೇಶದ ದೂರದ ಗ್ರಾಮಗಳಲ್ಲಿ ನೆಲೆಸಿರುವ ಜನರ ಆಧಾರ್ ನಂಬರ್ ಜತೆ ಮೊಬೈಲ್ ನಂಬರ್ ಲಿಂಕ್ ಮಾಡುವುದು, ಆಧಾರ್ ಕಾರ್ಡ್​ನಲ್ಲಿ ವಿವರಗಳನ್ನು ನವೀಕರಿಸುವುದು, ಮನೆ ಬಾಗಿಲಲ್ಲೇ ಮಕ್ಕಳ ದಾಖಲಾತಿ ನಡೆಸುವುದಕ್ಕೆ ತರಬೇತಿ ನೀಡುತ್ತಿದೆ.

ಯೋಜನೆಯ ಎರಡನೇ ಭಾಗದಲ್ಲಿ ಎಲ್ಲ 1,50,000 ಅಂಚೆ ಅಧಿಕಾರಿಗಳನ್ನು ಬಳಸಿಕೊಳ್ಳ ಲಾಗುವುದು. ಹೆಚ್ಚಿನ ಜನರನ್ನು ತಲುಪುವ ಮತ್ತು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರನ್ನು ನೋಂದಾಯಿಸುವ ಗುರಿಯನ್ನು ಯುಐಡಿಎಐ ಹೊಂದಿದೆ. ಅದರ ಭಾಗವೇ ಈ ತರಬೇತಿ ಕಾರ್ಯಕ್ರಮ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಅಗತ್ಯ ವಿವರಗಳನ್ನು ನವೀಕರಿಸಲು ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಆಧರಿತ ಆಧಾರ್ ಕಿಟ್​ಗಳನ್ನು ಯುಐಡಿಎಇ, ಪೋಸ್ಟ್​ಮ್ಯಾನ್​ಗಳಿಗೆ ಒದಗಿಸಲಿದೆ. ಇದುವರೆಗೆ ಮಕ್ಕಳ ದಾಖಲಾತಿಗಾಗಿ ಐಪಿಪಿಬಿ ಪೋಸ್ಟ್​ಮ್ಯಾನ್​ಗಳು ಟ್ಯಾಬ್ಲೆಟ್ ಮತ್ತು ಮೊಬೈಲ್ ಆಧರಿತ ಕಿಟ್ ಬಳಸುತ್ತಿದ್ದರು ಎಂದವರು ಹೇಳಿದ್ದಾರೆ. ಐಪಿಪಿಬಿ ಪೋಸ್ಟ್​ಮೆನ್​ಗಳ ಹೊರತಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಾಮಾನ್ಯ ಸೇವಾಕೇಂದ್ರದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ 13 ಸಾವಿರ ಬ್ಯಾಂಕಿಂಗ್ ಪ್ರತಿನಿಧಿಗಳನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲು ಯುಐಡಿಎಐ ಯೋಜಿಸಿದೆ.

ಆಧಾರ್ ಸೇವಾ ಕೇಂದ್ರ: ದೇಶದ 755 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರ ತೆರೆಯಲಾಗುವುದು. ಪ್ರಸ್ತುತ ದೇಶದ 72 ನಗರಗಳಲ್ಲಿ 88 ಯುಐಡಿಎಐ ಸೇವಾ ಕೇಂದ್ರಗಳಿವೆ. ಈಗ ಕುಗ್ರಾಮಗಳಲ್ಲೂ ಈ ಕೇಂದ್ರಗಳನ್ನು ತೆರೆಯುವ ಯೋಜನೆ ಇದೆ. ಈ ಸಂಬಂಧ ಸರಕಾರಿ ಜಾಗದಲ್ಲಿ ಸೇವಾ ಕೇಂದ್ರ ತೆರೆಯಲು ಸ್ಥಳ ಒದಗಿಸುವಂತೆ ರಾಜ್ಯ ಸರಕಾರಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರಗಳಲ್ಲಿ ಸರಾಸರಿ ಸುಮಾರು 50 ಸಾವಿರ ಜನರು ತಮ್ಮ ವಿಳಾಸ, ಫೋನ್ ನಂಬರ್ ಹಾಗೂ ಇತರೆ ವಿವರಗಳನ್ನು ಆಧಾರ್​ನ ಸ್ವಯಂ ಸೇವಾ ಪೋರ್ಟಲ್ ಮುಖೇನ ಅಪ್​ಡೇಟ್ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ವಿವರಗಳನ್ನು ಅಪ್​ಡೇಟ್ ಮಾಡಲು ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಲೇಬೇಕಿದೆ. ಈ ತೊಂದರೆಯನ್ನು ತಪ್ಪಿಸಲು ಯುಐಡಿಎಐ ದೇಶದ 7224 ಬ್ಲಾಕ್​ಗಳಲ್ಲಿ 'ಮಿನಿ' ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಿದೆ ಎಂದು ಅವರು ಹೇಳಿದ್ದಾರೆ. ಯುಐಡಿಎಐ ದೇಶದ ಎಲ್ಲ ನಿವಾಸಿಗಳಿಗೆ 12 ಅಂಕಿಯ ಬಯೋಮೆಟ್ರಿಕ್ ಗುರುತಿನ ಸಂಖ್ಯೆಯಾದ ಆಧಾರ್ ಕಾರ್ಡ್ ನೀಡುವ ನೋಡಲ್ ಸಂಸ್ಥೆಯಾಗಿದೆ. ಇಲ್ಲಿಯವರೆಗೆ 1.33 ಶತಕೋಟಿ ಜನರಿಗೆ ಆಧಾರ್ ಸಂಖ್ಯೆ ನೀಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries