ಮಂಜೇಶ್ವರ: ಐ.ಸಿ.ಡಿ.ಎಸ್ ಮಂಜೇಶ್ವರ ವತಿಯಿಂದ ಮೀಂಜ ಗ್ರಾಮ ಪಂಚಾಯತಿ ಅರಿಯಾಲ ಬೇರಿಕೆ ಅಂಗನವಾಡಿ ಪ್ರವೇಶೋತ್ಸವ ನಡೆಯಿತು. ಗ್ರಾ.ಪಂ.ಸದಸ್ಯ ಚಂದ್ರಶೇಖರ್ ಉದ್ಘಾಟಿಸಿ ಅಂಗನವಾಡಿ ಹೂಮಳೆ ಪುಸ್ತಕ ಮತ್ತು ಸಿಹಿ ತಿಂಡಿಯನ್ನು ವಿತರಿಸಿದರು. ಅಭಿವೃದ್ದಿ ಸಮಿತಿ ಸದಸ್ಯ ತುಳಸಿದಾಸ್ ಮಕ್ಕಳಿಗೆ ಬ್ಯಾಗ್‍ಗಳನ್ನು ವಿತರಿಸಿದರು. ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಸ್ವಾಗತಿಸಿ, ಜಲಜ ವಂದಿಸಿದರು.