ನವದೆಹಲಿ: ಪಶ್ಚಿಮ ಬಂಗಾಳದ ಶ್ರೇಷ್ಠ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ರವೀಂದ್ರನಾಥ ಠಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಕ್ಷಿಪಣಿ ಮನುಷ್ಯ ಎಂದು ಕರೆಯಲ್ಪಡುವ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮಹಾತ್ಮಾ ಗಾಂಧಿಯವರ ಹಾಗೆ ದೇಶದ ನೋಟುಗಳಲ್ಲಿ ಮುದ್ರಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಭಾರತೀಯ ಕರೆನ್ಸಿ ನೋಟುಗಳಲ್ಲಿ ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರ ಭಾವಚಿತ್ರ ಇರುವುದು ಸಾಮಾನ್ಯ. ಆದಾಗ್ಯೂ, ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ಹೊಸ ಸರಣಿಯ ನೋಟುಗಳಲ್ಲಿ ಟಾಗೋರ್ ಮತ್ತು ಕಲಾಂ ಅವರ ಚಿತ್ರಗಳನ್ನು ಬಳಸಲು ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.
ಇದೇ ಮೊದಲ ಬಾರಿಗೆ ಆರ್‌ಬಿಐ ಮಹಾತ್ಮಾ ಗಾಂಧಿ ಹೊರತುಪಡಿಸಿ ಇತರ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳಲ್ಲಿ ಬಳಸಲು ಪರಿಗಣಿಸುತ್ತಿದೆ. ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಪಿಎಂಸಿಐಎಲ್) ಕಳುಹಿಸಿದೆ ಎಂದು ತಿಳಿದುಬಂದಿದೆ.
ಮಹಾತ್ಮಾ ಗಾಂಧಿ, ರವೀಂದ್ರ ನಾಥ್ ಠಾಗೋರ್ ಮತ್ತು ಅಬ್ದುಲ್ ಕಲಾಂ ವಾಟರ್‌ಮಾರ್ಕ್‌ಗಳ ಎರಡು ಪ್ರತ್ಯೇಕ ಸೆಟ್ ಮಾದರಿಗಳನ್ನು ಐಐಟಿ-ದೆಹಲಿ ಎಮೆರಿಟಸ್ ಪ್ರೊಫೆಸರ್ ದಿಲೀಪ್ ಟಿ ಶಹಾನಿ ಅವರಿಗೆ ನೀಡಲಾಗಿದೆ, ಅವರು ಎರಡು ಸೆಟ್‌ಗಳಿಂದ ಆಯ್ಕೆ ಮಾಡಲು ಮತ್ತು ಸರ್ಕಾರದಿಂದ ಅಂತಿಮ ಪರಿಗಣನೆಗೆ ಕಳುಹಿಸಲು ತಿಳಿಸಲಾಗಿದೆ.
ನೋಟುಗಳಲ್ಲಿ ಒಂದು ಅಥವಾ ಎಲ್ಲಾ ಮೂರು ಚಿತ್ರಗಳನ್ನು ಆಯ್ಕೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಮೂರು ವಾಟರ್‌ಮಾರ್ಕ್ ಮಾದರಿಗಳನ್ನು ವಿನ್ಯಾಸಗೊಳಿಸಲು ಅಧಿಕೃತ ಅನುಮತಿ ಇತ್ತು. ಇನ್ನೂ ಯಾವುದೇ ದೃಢ ನಿರ್ಧಾರವನ್ನು ತೆಗೆದುಕೊಂಡಿಲ್ಲ,
2021 ರಲ್ಲಿ, ಆರ್‌ಬಿಐ ತನ್ನ ಮೈಸೂರು ಮೂಲದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಹೊಶಂಗಾಬಾದ್‌ನಲ್ಲಿರುವ ಎಸ್‌ಪಿಎಂಸಿಐಎಲ್‌ನ ಸೆಕ್ಯುರಿಟಿ ಪೇಪರ್ ಮಿಲ್‌ಗೆ ತಮ್ಮದೇ ಆದ ವಾಟರ್‌ಮಾರ್ಕ್ ಮಾದರಿಗಳನ್ನು ವಿನ್ಯಾಸಗೊಳಿಸಲು ಸೂಚನೆಗಳನ್ನು ನೀಡಿತು.
ಬಳಿಕ RBI ಮತ್ತು SPMCIL ತಮ್ಮ ಮಾದರಿಗಳನ್ನು ಪರೀಕ್ಷಿಸಲು ಶಹಾನಿಗೆ ಕಳುಹಿಸಿದವು. ಮಾದರಿಗಳ ಸೂಕ್ಷ್ಮ ಅಂಶಗಳ ಕುರಿತು ಶಹಾನಿ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ.