ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಿಮಾನದೊಳಗೂ ಪ್ರತಿಭಟನೆ ನಡೆದಿದೆ. ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಟ್ಟನ್ನೂರು ಬ್ಲಾಕ್ ಅಧ್ಯಕ್ಷ ಫರ್ದೀನ್ ಮಜೀದ್, ಜಿಲ್ಲಾ ಕಾರ್ಯದರ್ಶಿ ನವೀನ್ ಕುಮಾರ್ ಪ್ರತಿಭಟನೆ ನಡೆಸಿದರು ಎಂದು ತಿಳಿದುಬಂದಿದೆ.
ಘೋಷಣೆಗಳನ್ನು ಕೂಗುತ್ತಾ ಮುಖ್ಯಮಂತ್ರಿಗಳತ್ತ ಸಾಗಿದ ಅವರನ್ನು ಜೊತೆಗಿದ್ದವರು ತಳ್ಳಿದರು. ಮುಖ್ಯಮಂತ್ರಿ ಜತೆಗಿದ್ದ ಎಲ್‌ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಪ್ರತಿಭಟನಾಕಾರರನ್ನು ದೂರ ತಳ್ಳುವ ದೃಶ್ಯ ಕಂಡು ಬಂತು.
ಮುಖ್ಯಮಂತ್ರಿಗಳು ಕಣ್ಣೂರಿನಿಂದ ತಿರುವನಂತಪುರಂ ತೆರಳಲು ವಿಮಾನವೇರಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ವಿಮಾನ ಹತ್ತಿದರು. ಅವರು ಮೊದಲು ತಮ್ಮ ಆಸನಗಳಿಂದಲೇ ಘೋಷಣೆಗಳನ್ನು ಕೂಗಿದರು ಮತ್ತು ನಂತರ ಮುಖ್ಯಮಂತ್ರಿ ಬಳಿಗೆ ತೆರಳಿದರು. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರು ಕಣ್ಣೂರಿನಿಂದ ವಿಮಾನ ಏರಿದ್ದರು.