ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಮತ್ತು ಬ್ಲಡ್ ಬ್ಯಾಂಕ್ ಜಂಟಿಯಾಗಿ ವಿಶ್ವ ರಕ್ತದಾನಿಗಳ ದಿನದ ನಿಮಿತ್ತ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕಾಞಂಗಾಡು ನಗರಸಭೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಜಿಲ್ಲಾ ಆಸ್ಪತ್ರೆಯ ಕಾನ್ಫರೆನ್ಸ್ ಸಭಾಂಗಣದಲ್ಲಿ ಸಮಾರಂಭವನ್ನು ಉದ್ಘಾಟಿಸಿದರು. ಆರೋಗ್ಯ ಅಧಿಕಾರಿ ಡಾ. ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಕೆ.ವಿ.ಪ್ರಕಾಶ್ ದಿನಾಚರಣೆಯ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತ ರಕ್ತದಾನಕ್ಕಾಗಿ ಕಾಞಂಗಾಡ್ ಬ್ಲಡ್ ಬ್ಯಾಂಕ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತಂದ ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ವತಿಯಿಂದ ಆಯೋಜಿಸಲಾದ ಸ್ವಗೃಹ ಶಿಬಿರದಲ್ಲಿ 30 ಮಂದಿ ರಕ್ತದಾನ ಮಾಡಿದರು. ರಕ್ತದಿನದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದ ಡಿಜಿಟಲ್ ಆನ್‍ಲೈನ್ ರಸಪ್ರಶ್ನೆಯಲ್ಲಿ ಟಾಟಾ ಟ್ರಸ್ಟ್ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಅನನ್ಯ ಪ್ರಥಮ ಸ್ಥಾನ ಗಳಿಸಿದರು.
ನಂತರ ಕಾಞಂಗಾಡ್ ನಸಿರ್ಂಗ್ ಸ್ಕೂಲ್ ಹಾಗೂ ಆರ್.ಬಿ.ಎಸ್.ಕೆ ದಾದಿಯರಿಗೆ ಜಾಗೃತಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ನಿಮ್ಮಿ ಜಾನ್ ಹಾಗೂ ಬ್ಲಡ್ ಬ್ಯಾಂಕ್ ಕೌನ್ಸಿಲರ್ ಅರುಣ್ ಬೇಬಿ ತರಗತಿಯಲ್ಲಿ ಭಾಗವಹಿಸಿದ್ದರು.
ಯುವ ಸಂಘಟನೆಯ ಪ್ರತಿನಿಧಿ ರಾಜೇಶ್ ವೆಳ್ಳಾಟ್, ಕೇರಳ ಬ್ಲಡ್ ಡೋನರ್ಸ್ ರಾಜ್ಯ ಸಮಿತಿ ಸದಸ್ಯ ಎ ದಿನೂಪ್, ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ನಿಮ್ಮಿ ಜಾನ್, ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಮಾತನಾಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಟಿ.ಪಿ.ಅಮೀನಾ ಸ್ವಾಗತಿಸಿ, ಜಿಲ್ಲಾ ಉಪ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್.ಸಯನಾ ವಂದಿಸಿದರು.