ಕಾಸರಗೋಡು: ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ (ಎಫ್‍ಎಸ್‍ಎಸ್‍ಎಐ) ರಾಷ್ಟ್ರೀಯ 'ಈಟ್ ರೈಟ್ ಇಂಡಿಯಾ ಯೋಜನೆಯನ್ವಯ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೊಳಿಸಿದ ಈಟ್ ರೈಟ್ ಇಂಡಿಯಾ ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಗೆ ರಾಷ್ಟ್ರೀಯ ಅಂಗೀಕಾರ ಲಭಿಸಿದೆ. ಆಹಾರ ಸುರಕ್ಷತೆ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು, ಆಹಾರವಸ್ತು ಮಾರಾಟಗಾರರು ಮತ್ತು ವ್ಯವಸ್ಥಾಪಕರಿಗೆ ತರಬೇತಿ, ಈಟ್ ರೈಟ್ ಕ್ಯಾಂಪಸ್, ಈಟ್ ರೈಟ್ ಸ್ಕೂಲ್ ಮತ್ತು ಸ್ಟ್ರೀಟ್ ಫುಡ್ ಹಬ್‍ನಂತಹ ಕಾರ್ಯಕ್ರಮಗಳನ್ನು ಯೋಜನೆಯ ಅಂಗವಾಗಿ ಜಾರಿಗೊಳಿಸಲಾಗಿತ್ತು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಪ್ರತಿನಿಧಿಯಾಗಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತ ವಿ.ಆರ್ ವಿನೋದ್, ಕಾಸರಗೋಡು ಜಿಲ್ಲಾ ಆಹಾರ ಸುರಕ್ಷತಾ ಸಹಾಯಕ ಆಯುಕ್ತ ಜಾನ್ ವಿಜಯಕುಮಾರ್ ಪಿ.ಕೆ. ಅವರು ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‍ಸುಖ್ ಮಾಂಡೋವಿಯ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.