ನೈನಿತಾಲ್: ಉತ್ತರಾಖಂಡದ ಪಿಥೋರಗಢದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹಿಮಾಲಯದ ಪ್ರವಾಸಕ್ಕೆಂದು ತೆರಳಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಮನೆಗೆ ಹಿಂದಿರುಗಲು ಸುತಾರಂ ಒಪ್ಪುತ್ತಿಲ್ಲ. ಈ ವಿಚಾರ ಉತ್ತರಾಖಂಡ ಸರಕಾರದ ತೆಲೆನೋವಿಗೆ ಕಾರಣವಾಗಿದೆ.
ಉತ್ತರ ಪ್ರದೇಶದ ಖೇರಿ ನಿವಾಸಿ ಹರ್ವಿಂದರ್ ಕೌರ್ ಕೆಲ ದಿನಗಳ ಹಿಂದೆ ತನ್ನ ತಾಯಿಯೊಂದಿಗೆ ನಬಿಧಾಂಗ್‌ಗೆ ಪ್ರವಾಸಕ್ಕೆ ತೆರಳಿದ್ದರು. ಅವಳು ಹಲವಾರು ದಿನಗಳ ಕಾಲ ಹಿಮಾಲಯ ಶ್ರೇಣಿಗಳಲ್ಲಿ ತಂಗಿದ್ದಳು. ಆದ್ರೆ, ಇನ್ನರ್ ಲೈನ್ ಪರ್ಮಿಟ್ ಅವಧಿ ಮುಗಿದ್ರೂ ವಾಪಸ್ ಬರಲು ತಯಾರಿಲ್ಲ ಎಂಬುದು ಅಚ್ಚರಿ.
ಇನ್ನರ್ ಲೈನ್ ಪರ್ಮಿಟ್ ಮುಗಿದ ನಂತರ ತಾಯಿ ಹಿಂತಿರುಗಿ ಬಂದು ಮಗಳ ಹಠ ನೋಡಿ.. ಇನ್ನರ್ ಲೈನ್ ಪರ್ಮಿಟ್ ಅನ್ನು ಸ್ವಲ್ಪ ಕಾಲ ವಿಸ್ತರಿಸಿದರು. ಪರ್ಮಿಟ್ ಅವಧಿ ಮುಗಿದ್ರೂ ಆಕೆ ವಾಪಸ್ ಬರುತ್ತಿಲ್ಲ. ಚೀನಾ ಗಡಿಯಲ್ಲಿ ಕಾವಲು ಕಾಯುತ್ತಿದ್ದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಕೂಡ ಆಕೆಯನ್ನು ವಾಪಸ್ ಕಳುಹಿಸಲು ಯತ್ನಿಸಿದ್ರೂ ಕಿವಿಗೊಡುತ್ತಿಲ್ಲ.
ವಿಷಯ ಗಮನಕ್ಕೆ ಬಂದ ನಂತರ ಧಾರ್ಚುಲಾ ಪೊಲೀಸರ ಮೂರು ಸದಸ್ಯರ ತಂಡವನ್ನು ನಾಲ್ಕೈದು ದಿನಗಳ ಹಿಂದೆ ನಬಿಧಾಂಗ್‌ಗೆ ಕಳುಹಿಸಲಾಗಿತ್ತು. ಆದ್ರೆ ಮಹಿಳೆ ಹಿಂತಿರುಗಲಿಲ್ಲ ಎಂದು ಪಿಥೋರಗಢ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ್ ಸಿಂಗ್ ಹೇಳಿದ್ದಾರೆ. ಬಲವಂತವಾಗಿ ಕರೆದುಕೊಂಡು ಹೋದರೆ ಪರ್ವತದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳೆದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಯತ್ನವಾಗಿ ಮಹಿಳೆಯನ್ನು ವಾಪಸ್ ಕರೆತರಲು ಆಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸರ ಜಂಟಿ ತಂಡವನ್ನು ಶುಕ್ರವಾರ ನಬಿಧಾಂಗ್‌ಗೆ ಕಳುಹಿಸಲಾಗಿದೆ ಎಂದು ಸಿಂಗ್ ತಿಳಿಸಿದರು. ಅಕ್ರಮವಾಗಿ ನೆಲೆಸಿರುವ ಮಹಿಳಾ ಪ್ರವಾಸಿಯನ್ನು ಭಾನುವಾರ ಕರೆತರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಮೇಲ್ನೋಟಕ್ಕೆ ಮಹಿಳೆ ಮಾನಸಿಕವಾಗಿ ದುರ್ಬಲಳಾಗಿದ್ದಾಳೆ ಎಂದು ಸಿಂಗ್ ಹೇಳಿದ್ದು, ತನ್ನನ್ನು ತಾನು ಪಾರ್ವತಿ ಎಂದು ಪ್ರವಾಸಿ ಹೇಳುತ್ತಾಳೆ ಎಂದು ಅವರು ತಿಳಿಸಿದರು. ಸರಕಾರದ ತಲೆನೋವಿಗೆ ಕಾರಣವಾಗಿರುವ ಮಹಿಳೆ ನಬಿಧಾಂಗ್‌ನಲ್ಲಿರುವ ಹೋಮ್ ಸ್ಟೇಯಲ್ಲಿ ಉಳಿದುಕೊಂಡಿದ್ದಾಳೆ. ಅವರನ್ನು ಧಾರ್ಚುಲಾಗೆ ಕರೆತಂದ ನಂತರ ಜಂಟಿ ವಿಚಾರಣೆ ನಡೆಸಿ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.